ಸಂತೋಷ ದೇಶಪಾಂಡೆ
ಬಾಗಲಕೋಟೆ: ಜಿಲ್ಲೆಯಲ್ಲಿರುವ ಐತಿಹಾಸಿಕ ಪ್ರವಾಸಿತಾಣಗಳಾದ ಬಾದಾಮಿ, ಐಹೊಳೆ, ಪದಕಲ್ಲುಗಳಿಗೆ ದೇಶಿ, ವಿದೇಶ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೇ ಸೂಕ್ತ ಮೂಲ ಸೌಕರ್ಯ ಇಲ್ಲದೇ ಒದ್ದಾಡುತ್ತಿದ್ದರು. ದಶಕದ ಕನಸಿನ ನನಸಾಗುವ ದಿನಗಳು ಹತ್ತಿರ ಬಂದಿವೆ. ಈ ವರ್ಷಾಂತ್ಯಕ್ಕೆ ಪ್ರವಾಸಿ ಪ್ಲಾಜಾಗಳು ಲೋಕಾರ್ಪಣೆಗೊಳ್ಳುವುದು ಬಹುತೇಕ ಖಚಿತವಾಗಿದೆ...!!
ಬಾದಾಮಿ, ಪಟ್ಟದಕಲ್ಲು, ಐಹೊಳೆ ಸೇರಿದಂತೆ ವಿವಿಧ ಪ್ರವಾಸಿ ತಾಣಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಐಟೆಕ್ ಹೊಟೇಲ, ಲೋಕಲ್ ಲುಕ್, ದೇಶಿತನ ಸೊಬಗು ಇಲ್ಲದೆ ಕೊರಗುತ್ತಿದ್ದರು. ಒಂದೇ ಸೂರಿನಡಿ ಸೌಲಭ್ಯ ಕಲ್ಪಿಸಲು ಪ್ಲಾಜಗಳ ನಿರ್ಮಾಣ ಮಾಡಬೇಕು ಎನ್ನುವ ಮಹದಾಸೆಗೆ ೨೦೧೯ ಕ್ಕೆ ಚಾಲನೆ ಸಿಕ್ಕಿತ್ತು. ಬಾದಾಮಿ, ಪಟ್ಟದಕಲ್ಲು ಯೋಜನೆಗಳು ೨೦೨೫ ಅಂತ್ಯಗೊಳ್ಳಲಿದ್ದು, ಪ್ರವಾಸಿಗರಿಗೆ ಪ್ಲಾಜಗಳು ಮುಕ್ತವಾಗಲಿವೆ.
ಪ್ಲಾಜಾಗಳ ನಿರ್ಮಾಣಕ್ಕೆ ಬಾದಾಮಿಯಲ್ಲಿ ೧೬ ಎಕರೆ, ಐಹೊಳೆಯಲ್ಲಿ ೪೧ ಎಕರೆ, ಪಟ್ಟದಕಲ್ಲಿನಲ್ಲಿ ೨೪ ಎಕರೆ ಭೂಮಿ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿತ್ತು, ಐಹೊಳೆಯಲ್ಲಿ ಕಾಮಗಾರಿ ಕೈಗೊಳ್ಳಲು ತೀವ್ರ ಅಡೆತಡೆ ಉಂಟಾಯಿತು. ಕಲ್ಲುಗಳೇ ಅಽಕ ಪ್ರಮಾಣದಲ್ಲಿ ಇದ್ದ ಕಾರಣ ಕಟ್ಟಡ ನಿರ್ಮಾಣ ಸುಲಭವಾಗಲಿಲ್ಲ. ಅದನ್ನು ಕೈ ಬಿಟ್ಟಿದ್ದು, ಬಾದಾಮಿ, ಪಟ್ಟದಕಲ್ಲಿನ ಪ್ಲಾಜ್‌ಗಳ ನಿರ್ಮಾಣ ಕಾಮಗಾರಿ ನಡೆದಿವೆ. ಪ್ಲಾಜಾಗಳಲ್ಲಿ ಪಾರ್ಕಿಂಗ್, ಶೌಚಗೃಹ, ಕ್ಲಾಕ್ ರೋಮ್, ಪ್ರವಾಸಿ ತಾಣಗಳ ಮಾಹಿತಿ ಕೇಂದ್ರ, ಆಹಾರ ಮಳಿಗೆಗಳು, ಸ್ಟೆಷನರಿ ವಸ್ತುಗಳ ಮಳಿಗೆಗಳು, ಕರಕುಶಲ ಮಳಿಗೆಗಳು (ಇಲ್ಲಿ ಇಳಕಲ್ಲ ಸಾರಿ, ಗುಳೇದಗುಡ್ಡ ಕಣ, ಅಮೀನಗಡ ಕರದಂಟು ಸೇರಿದಂತೆ ಈ ಭಾಗದ ವಿಶೇಷತೆ) ಇರಲಿದೆ.
ಬಾದಾಮಿ ಬನಶಂಕರ ದೇವಾಲಯ ಸಮೀಪ ೧೬ ಎಕರೇ ಪ್ರದೇಶದಲ್ಲಿ ತ್ರಿ ಸ್ಟಾç್ಯರ್ ಹೊಟೇಲ್ ಪ್ಲಾಜಾ ನಿರ್ಮಾಣಗೊಂಡಿದೆ. ೭೨ ಕೊಠಡಿಗಳು ಇಲ್ಲಿ ಲಭ್ಯವಿದೆ. ೧೮.೩೨ ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. ಮೇ ರೈಟ್ಸ್ ಸಂಸ್ಥೆಯು ಇದರ ಉಸ್ತುವಾರಿ ವಹಿಸಿಕೊಂಡಿದೆ. ಪಟ್ಟದಕಲ್ಲಿನಲ್ಲಿ ೨೬ ಎಕರೇ ಪ್ರದೇಶದಲ್ಲಿ ೨೯.೨೫ ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಗ್ರಹ ಮಂಡಳಿ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದ್ದು, ಉ-ಕ ಜಾನಪದ ಕಲೆಗಳ ಅನಾವರಣಕ್ಕೆ ಬಯಲ ರಂಗಮAದಿರ, ಕರಕುಶಲ ಮಳಿಗೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ಕಲ್ಪಿಸಲಾಗುತ್ತದೆ.
ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ವೀಕ್ಷಣೆಗೆ ಪ್ರತಿ ವರ್ಷ ಲಕ್ಷಾಂತರ ಜನರು ಆಗಮಿಸುತ್ತಾರೆ. ಬಾದಾಮಿ, ಬಾಗಲಕೋಟೆ ನಗರದ ಹೊರತು ಪಡಿಸಿದರೇ ಬೇರೆ ಎಲ್ಲಿಯೂ ಹೇಳಿಕೊಳ್ಳುವಂತ ಸೌಲಭ್ಯಗಳು, ಹೊಟೇಲ್‌ಗಳು ಇರಲಿಲ್ಲ. ಹೀಗಾಗಿ ಪ್ರವಾಸಿಗರು ಸೌಲಭ್ಯಗಳ ಕೊರತೆ ಬಗ್ಗೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು. ಇದೀಗ ಸರ್ಕಾರ ದಿಟ್ಟ ಹೆಜ್ಜೆಗೆ ಪ್ರವಾಸಿ ಪ್ರಿಯರು ಸಂತಸಗೊAಡಿದ್ದಾರೆ.