ಆನೇಕಲ್: ರಾಜ್ಯ ಸರ್ಕಾರ ಇನ್ನೊಂದು ವರ್ಷದಲ್ಲಿ 3.40 ಲಕ್ಷ ಬಡವರಿಗೆ ಮನೆಗಳನ್ನು ನೀಡುವ ಗುರಿ ಹೊಂದಿದೆ. ಇದು ಸಿಎಂ ಬಸವರಾಜ ಬೊಮ್ಮಾಯಿ ಅವರ ಆಶಯವಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಸೂರ್ಯನಗರ ಮೊದಲನೇ ಹಂತದಲ್ಲಿ ಸೂರ್ಯ ಎಲಿಗೆನ್ಸ್ ಬಹುಮಹಡಿ ವಸತಿ ಸಮುಚ್ಚಯವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಶೇ.50:50 ಅನುಪಾತದಲ್ಲಿ ಸೂರ್ಯನಗರ 4ನೇ ಹಂತಕ್ಕೆ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಂಡಿದೆ. ನಿಗದಿತ ಸಮಯದಲ್ಲಿ ಈ ಭೂಮಿ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ರೈತರು ಹಾಗೂ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳ ಸಭೆ ಕರೆದು ಇತ್ಯರ್ಥಪಡಿಸುವಂತೆ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಬಿ.ಶಿವಣ್ಣ ಮನವಿ ಮಾಡಿಕೊಂಡಿದ್ದಾರೆ ಎಂದರು.
ಕರ್ನಾಟಕ ಗೃಹ ಮಂಡಳಿ ರಾಜ್ಯಾದ್ಯಂತ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ನಗರ ಪ್ರದೇಶದ ಮೇಲಿನ ಒತ್ತಡ ನಿವಾರಣೆಗೆ ಸಮೀಪದ ಗ್ರಾಮಗಳಿಗೂ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
192 ್ಲ್ಯಾಟ್‌ಗಳು ಬಾಕಿ: ಸೂರ್ಯ ಎಲಿಗೆಂಟ್ ಅಪಾರ್ಟ್‌ಮೆಂಟ್‌ನಲ್ಲಿ ಎರಡು ಹಾಗೂ ಮೂರು ಕೊಠಡಿಗಳ ಸುಸಜ್ಜಿತ ್ಲ್ಯಾಟ್‌ಗಳನ್ನು ವಾಸಯೋಗ್ಯವಾಗಿ ನಿರ್ಮಿಸಲಾಗಿದೆ. ಬಹುತೇಕ ಎಲ್ಲ ್ಲ್ಯಾಟ್‌ಗಳು ಭರ್ತಿಯಾಗಿದ್ದು, ಇನ್ನೂ 192 ್ಲ್ಯಾಟ್‌ಗಳು ಬಾಕಿ ಇವೆ. ಇವನ್ನು ಪಡೆಯಲು ಜನರು ಮುಂದಾಗಬೇಕು ಎಂದು ವಿ.ಸೋಮಣ್ಣ ಮನವಿ ಮಾಡಿಕೊಂಡರು.
ನೆರೆಹೊರೆ ಗ್ರಾಮಗಳಿಗೂ ಸವಲತ್ತು: ಸೂರ್ಯ ಎಲಿಗೆಂಟ್ ಅಪಾರ್ಟ್‌ಮೆಂಟ್‌ಗೆ ಹೊಂದಿಕೊಂಡಂತೆ ಇರುವ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವುದು ನಮ್ಮ ಆದ್ಯತೆ ಆಗಿದೆ. ಇದಕ್ಕೆ ಅಧಿಕಾರಿಗಳು ಸಹಕರಿಸಬೇಕು. ಗೃಹ ಮಂಡಳಿ ಕೂಡ ತನ್ನ ಕಾರ್ಯವೈಖರಿ ಬದಲಿಸಿಕೊಂಡು, ಈ ಕಾರ್ಯಕ್ಕೆ ಮುಂದಾಗಲಿದೆ ಎಂದು ವಸತಿ ಸಚಿವರು ಹೇಳಿದರು.
25 ಎಕರೆ ಕೊಟ್ಟರೆ ಕ್ರೀಡಾಂಗಣ: ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸುವಂತೆ ಸಂಸದ ಡಿ.ಕೆ.ಸುರೇಶ್ ಸಲಹೆ ನೀಡಿದ್ದಾರೆ. ತಾಲೂಕಿಗೆ ಈಗಾಗಲೇ ಮೆಟ್ರೋ ಕೂಡ ಬಂದಿದೆ. ಜಿಗಣಿಯ ಯೋಗ ಅನುಸಂಧಾನ ಕೇಂದ್ರದ ಬಳಿ ಕ್ರೀಡಾಂಗಣ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದರ ಅಕ್ಕಪಕ್ಕದಲ್ಲಿ 25 ಎಕರೆ ಭೂಮಿ ಕೊಟ್ಟರೆ, ಅದೆಷ್ಟೇ ದುಬಾರಿ ಆದರೂ ಅದನ್ನು ಪಡೆದು ಕ್ರೀಡಾಂಗಣ ನಿರ್ಮಿಸಲು ಬದ್ಧ ಎಂದು ವಿ.ಸೋಮಣ್ಣ ಹೇಳಿದರು.
ಖಾಸಗಿಯವರ ಜತೆ ಸ್ಪರ್ಧೆಯಲ್ಲಿ ವಿಲ: ಕರ್ನಾಟಕ ಗೃಹ ಮಂಡಳಿ ಖಾಸಗಿ ಬಿಲ್ಡರ್‌ಗಳು, ನಿವೇಶನ ಮಾರಾಟಗಾರರೊಂದಿಗೆ ಸ್ಪರ್ಧಿಸುವಲ್ಲಿ ವಿಲವಾಗಿದೆ. ಆನೇಕಲ್ ತಾಲೂಕಿನಲ್ಲಿ ಮಂಡಳಿಯು ಮನೆ ಹಾಗೂ ನಿವೇಶನಗಳನ್ನು ಮಾಡುತ್ತಿದೆ. ಸ್ಥಳೀಯ ನಿವೇಶನರಹಿತರಿಗೆ ಆದ್ಯತೆ ಮೇರೆಗೆ ಶೇ.10 ಕಡಿಮೆ ದರದಲ್ಲಿ ಮನೆ, ನಿವೇಶನ ಕೊಡುವ ಕಾರ್ಯ ಆಗಬೇಕು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಾತನಾಡುವಂತೆ ಸಂಸದ ಡಿ.ಕೆ. ಸುರೇಶ್ ವಸತಿ ಸಚಿವರಿಗೆ ಸಲಹೆ ನೀಡಿದರು.
27 ಲಕ್ಷ ರೂ. ಬೆಲೆ: ಸೂರ್ಯ ಎಲಿಗೆಂಟ್ ಬಹುಮಹಡಿ ವಸತಿ ಸಮುಚ್ಚಯ ಮೂರು ವರ್ಷಗಳ ಹಿಂದೆ ಉದ್ಘಾಟನೆ ಆಗಿದ್ದರೆ, 15 ಲಕ್ಷ ರೂ.ಗಳಿಗೆ ್ಲ್ಯಾಟ್‌ಗಳನ್ನು ಹಂಚಿಕೆ ಮಾಡಬಹುದಾಗಿತ್ತು. ಆದರೆ, ಮೂರು ವರ್ಷದ ವಿಳಂಬದಿಂದಾಗಿ ್ಲ್ಯಾಟ್‌ಗಳ ಬೆಲೆ 27 ಲಕ್ಷ ರೂ.ಗೆ ಹೆಚ್ಚಾಗಿದೆ. ಇಂಥ ನಿರ್ಲಕ್ಷ್ಯವನ್ನು ಅಧಿಕಾರಿಗಳು ಮುಂದಿನ ದಿನಗಳಲ್ಲಾದರೂ ಸರಿಪಡಿಸಿಕೊಳ್ಳಬೇಕು ಎಂದು ಡಿ.ಕೆ. ಸುರೇಶ್ ಹೇಳಿದರು.
ಶಾಸಕ ಬಿ. ಶಿವಣ್ಣ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ವಸತಿ ಯೋಜನೆಯಲ್ಲಿ ಮನೆ ಕಟ್ಟಿಕೊಂಡವರಿಗೆ ಸರ್ಕಾರದಿಂದ ಬಾಕಿ ಇರುವ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ವಸತಿ ಇಲಾಖೆ ಕಾರ್ಯದರ್ಶಿ ಮೀನಾ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ, ತಹಸೀಲ್ದಾರ್ ದಿನೇಶ್, ಗೃಹ ಮಂಡಳಿ ಆಯುಕ್ತ ರಮೇಶ್, ಬಮುಲ್ ಮಾಜಿ ಅಧ್ಯಕ್ಷ ಆರ್.ಕೆ. ರಮೇಶ್, ಮುಖ್ಯಅಭಿಯಂತರ ಟಿ.ಡಿ ನಂಜುಂಡಪ್ಪ, ಅಧೀಕ್ಷಕ ಅಭಿಯಂತರ ಎಚ್. ಸುರೇಶ್, ಕಾರ್ಯಪಾಲಕ ಅಭಿಯಂತ ಲೊಕೇಶ್ ಬಾಬು, ಎಇಇ ಪಿ.ಕೆ.ಬೋಪಣ್ಣ ಮತ್ತಿತರರಿದ್ದರು.
ಸೂರ್ಯ ಎಲಿಗೆಂಟ್‌ನಲ್ಲಿನ ಸೌಲಭ್ಯಗಳು: ಸೂರ್ಯನಗರ ಒಂದನೇ ಹಂತದಲ್ಲಿ 6.14 ಎಕರೆ ವ್ಯಾಪ್ತಿಯಲ್ಲಿ 77.14 ಕೋಟಿ ರೂ. ವೆಚ್ಚದಲ್ಲಿ ಸೂರ್ಯ ಎಲಿಗೆಂಟ್ ಅಪಾರ್ಟ್‌ಮೆಂಟ್ ನಿರ್ಮಾಣವಾಗಿದೆ. 384 ಮನೆಗಳಿದ್ದು, 2 ಹಾಗೂ 3 ಕೋಣೆಗಳ ತಲಾ 192 ್ಲ್ಯಾಟ್‌ಗಳು ಲಭ್ಯ ಇವೆ. ರಸ್ತೆ, ಕಾವೇರಿ ನೀರು, ಒಳಚರಂಡಿ, ವಿದ್ಯುತ್, ಕ್ಲಬ್ ಹೌಸ್,ಲೈಬ್ರೆರಿ, ಜಿಮ್, ಪಾರ್ಟಿ ಹಾಲ್, ಪುಡ್ ಕೋರ್ಟ್, ಒಳಾಂಗಣ ಕ್ರೀಡಾಂಗಣ, ಈಜುಕೊಳ, ಮಕ್ಕಳ ಆಟದ ಮೈದಾನ, ಉದ್ಯಾನ, ಮಳೆನೀರು ಕೊಯ್ಲು ಪದ್ಧತಿ, ಪಾರ್ಕಿಂಗ್ ವ್ಯವಸ್ಥೆ ಇದೆ.