ಜಿಲ್ಲೆ

ವರುಣಾರ್ಭಟಕ್ಕೆ ಗಿರಿಜಿಲ್ಲೆ ತತ್ತರ

ಯಾದಗಿರಿ: ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದೆ. ಹಲವಾರು ಮಳಿಗೆ, ಮನೆಗಳಿಗೆ ನೀರು ನುಗ್ಗಿದೆ. ಪ್ರಮುಖ ಸೇತುವೆಗಳು ಮುಳುಗಡೆಯಾಗಿ ಸಂಚಾರ ಬಂದ್ ಆಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಈ ಮಳೆಗೆ ಕೋಟಗೇರಾ ಗುಡ್ಡದ ಜಲಪಾತದ ಮೋಹಕ ನೋಟ ನೋಡಲು ಎರಡು ಕಣ್ಣು ಸಾಲದೆಂಬAತೆ ನೀರು ಧುಮ್ಮುಕ್ಕುತ್ತಿದೆ.

ಸೈಕ್ಲೋನ್ ಹೊಡೆತದಿಂದಾಗಿ ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಪಾರ ಪ್ರಮಾಣ ಮಳೆ ಸುರಿಯುತ್ತಿದೆ. ಆ.೩೧ರಿಂದ ಸೆ.೩ರವರೆಗೆ ಹೆಚ್ಚು ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ನದಿ ಪಾತ್ರಕ್ಕೆ ಹೋಗದಂತೆ ಯಾರು ಹೋಗದಂತೆ ಜಿಲ್ಲಾಡಳಿತ ಎಚ್ಚರಿಕೆ ಈಗಾಗಲೇ ನೀಡಿದೆ.
ಯರಗೋಳ ಸಮೀಪ ಹತ್ತಿಕುಣಿ, ಬಾಚವಾರ, ಕೋಟಗೇರಾ, ಮೋಟ್ನಳ್ಳಿ, ಗುಲಗುಂಜಿ, ಸಮಣಪುರ, ಸುತಾರ್ ಮತ್ತು ಹೊಸಳ್ಳಿ ಗ್ರಾಮದ ಗುಡ್ಡಗಳಲ್ಲಿ ಮಳೆಯಿಂದಾಗಿ ಮರ-ಗಿಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರು ಸೇವಿಸಲು ನವಿಲು, ಮೊಲ, ನರಿ, ಕಾಡುತೋಳ, ಕಾಡು ಹಂದಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿವೆ.

ಕೊಟಗೇರಾ ಗ್ರಾಮದ ಗುಡ್ಡದಲ್ಲಿನ ಜಲಪಾತ ಧೂಮ್ಮಿಕ್ಕಿ ಹರಿದು, ಪ್ರವಾಸಿಗರಿಗೆ ಕೈ ಮಾಡಿ ಕರೆಯುತ್ತಿದೆ. ಯುವಕ, ಯುವತಿಯರು ಅಲ್ಲಿಗೆ ತೆರಳಿ ಜಲಪಾತದಂತಹ ಈ ದೃಶ್ಯ ವೀಕ್ಷಿಸಿ, ಮೊಬೈಲï‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮ ಪಡುತ್ತಿz್ದÁರೆ. ಬಹುತೇಕ ಗ್ರಾಮಗಳ ಕೆರೆ, ಹಳ್ಳಗಳಲ್ಲಿ ಮಳೆ ನೀರು ಸಂಗ್ರಹವಾಗಿ, ಭತ್ತ ನಾಟಿ ಮಾಡಿದ ಗz್ದೆಗಳಲ್ಲಿ ನೀರು ಹೊಕ್ಕಿದ್ದು, ಬೀಳು ಬಿದ್ದ ಹೊಲಗಳಲ್ಲು ಕಳೆನಾಶಕ ತುಂಬಿಕೊAಡಿದೆ.

ಹೋಗುವ ಮಾರ್ಗ: ಯಾದಗಿರಿ ಜಿ¯್ಲÁ ಕೇಂದ್ರದಿAದ ೨೦ಕಿಮೀ ದೂರವಿದ್ದು. ಬಂದಳ್ಳಿ ಮಾರ್ಗವಾಗಿ ಹೊನಗೇರಾ, ಕಟ್ಟಿಗೆಶಾಪುರ ಗ್ರಾಮದ ಮೂಲಕ ತೆರಳಬೇಕು. ಯಾದಗಿರಿಯಿಂದ ಹತ್ತಿಕುಣಿ, ಮಾಟನಳ್ಳಿ ಗ್ರಾಮದಿಂದ ಕೋಟಗೇರಾಗೆ ತೆರಳಬಹುದು ಮಹೇಶ ಕೋಟಗೇರಾ ಮಾಹಿತಿ ನೀಡಿದರು.