ಮದ್ದೂರು: ತಾಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ.ಪಿ. ಉಮಾ ಚಿಕ್ಕಪುಟ್ಟೇಗೌಡ, ಉಪಾಧ್ಯಕ್ಷರಾಗಿ ಮಂಚಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಡಿ. ಪರಮೇಶ್ ಅವಿರೋಧ ಆಯ್ಕೆ ಘೋಷಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್, ಸದಸ್ಯರಾದ ಅಬ್ದುಲ್ ಖುದ್ದೂಸ್, ಎಂ.ಎಸ್. ಸಿದ್ದರಾಜು, ದೀಪಕ್, ವರಲಕ್ಷ್ಮೀ, ಡಿ.ಸಿ.ಲಕ್ಷ್ಮೀ ಎಸ್.ಬಿ. ವರಲಕ್ಷ್ಮೀ, ಎಂ.ಮಹೇಶ, ರೇಖಾ, ಎನ್. ಪೂರ್ಣಿಮಾ, ರಾಜಣ್ಣ, ಮುಖಂಡರಾದ ಕದಲೂರು ಕೆ.ಎಂ. ರವಿ, ಕೆ.ಎಂ.ರಾಜಣ್ಣ, ಎನ್.ಎಂ. ಪ್ರಕಾಶ್, ಯತೀಶ್, ಚಿಕ್ಕ ತಮ್ಮೇಗೌಡ, ಸತೀಶ ಇತರರಿದ್ದರು.