ವಿಜಯಪುರ ನಗರದ ಬ್ಯಾಂಕರ್ಸ್ ಕಾಲೋನಿಯಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಸಪ್ತದೇವತೆಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಷಣ್ಮೂಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಬ್ಯಾಂಕರ್ಸ್ ಕಾಲೋನಿಯ ಅಧ್ಯಕ್ಷ ಶಶಿಧರ ರೋಡಗಿ, ಅಪ್ಪಣ್ಣ ಬಡಿಗೇರ, ಅಮೋ ವಾಲೀಕಾರ, ನಾಗಯ್ಯ ಹಿರೇಮಠ, ಸಜ್ಜನ, ರವಿ ಹುಲ್ಲಣ್ಣವರ, ವೈ. ಡಿ. ದೇಶಪಾಂಡೆ, ಅಶೋಕ ಕಲಶೆಟ್ಟಿ, ಸಂಗಮೇಶ ವಾಲಿ ಇದ್ದರು. 
ಜಿಲ್ಲೆ

ಗುಪ್ತನಿಧಿ ಮೂಲಕ ಭಕ್ತರು ತೋರುವ ಭಕ್ತಿ ಅಪಾರ

ವಿಜಯಪುರ: ಆದಿಪೂಜಿತ ವರಸಿದ್ದಿ ವಿನಾಯಕ ಮತ್ತು ಸಪ್ತ ದೇವತೆಗಳ ದೇವಸ್ಥಾನ ಸಣ್ಣ ಸ್ಥಳಾವಕಾಶದಲ್ಲಿ ದೊಡ್ಡ ಮನಸ್ಸುಗಳನ್ನು ತುಂಬಿ ಎಲ್ಲರನ್ನೂ ಒಂದು ಗುಡಿಸಿದೆ ಎಂದು ಷಣ್ಮೂಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.

ನಗರದ ಬ್ಯಾಂಕರ್ಸ್ ಕಾಲೋನಿಯ ಸಪ್ತದೇವತೆಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಶಿವಚನೆ ನೀಡಿದರು.
ಗುಪ್ತ ನಿಧಿ ಕೊಡುವದರ ಮೂಲಕ ತಾವು ಕೊಟ್ಟ ದಾನ ಬೇರೆಯವರಿಗೆ ಗೊತ್ತಾಗಬಾರದು ಎನ್ನುವುದು ದೊಡ್ಡ ಮನಸ್ಸಿನ ಬ್ಯಾಂಕರ್ಸ್ ಕಾಲೋನಿಯ ಭಕ್ತರು ಸಪ್ತ ದೇವತೆಗಳ ಪ್ರೀತಿಗೆ ಪಾತ್ರರಾಗಿದ್ದೀರಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಯಾವ ರಾಜಕಾರಣಿಗಳ ಹಂಗು ಇಲ್ಲದೆ ನಿರ್ಮಿಸಿದ ಮೊದಲ ದೇವಸ್ಥಾನ. ದೂರದ ಊರಿನಿಂದ ಕಲ್ಲು ತಂದು ಸುಂದರವಾದ ದೇವಾಲಯ ನಿರ್ಮಿಸಿ ಒಳ್ಳೆಯ ಧಾರ್ಮಿಕ ಕಾರ್ಯ ಮಾಡಿದ್ದೀರಿ, ಇದರಿಂದ ಕಾಲೋನಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ನಡೆಯಲಿ, ನಿಮ್ಮ ಸಮಾಜ ಸೇವೆ ಬೇರೆಯವರಿಗೆ ಅನುಕರಣೆ ಆಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ವರಸಿದ್ಧಿ ವಿನಾಯಕ ದೇವಸ್ಥಾನ ಸಪ್ತದೇವತೆಗಳ ಸಂಗಮ, ವರಸಿದ್ಧಿ ವಿನಾಯಕನಿಗೆ 108 ಹೆಸರುಗಳಿಂದ ಕರೆಯುತ್ತಾರೆ ಅದರಲ್ಲಿ ವರಸಿದ್ಧಿ ವಿನಾಯಕವೂ ಒಂದು, ವಿಜಯಪುರ ನಗರದಲ್ಲಿ ದೇವಸ್ಥಾನ ಕಟ್ಟುವದರ ಮೂಲಕ ಒಂದು ಧಾರ್ಮಿಕ, ಸಾಂಸ್ಕೃತಿಕ ಕೇಂದ್ರ ನಿರ್ಮಿಸಿದ ಕೀರ್ತಿ ಬ್ಯಾಂಕರ್ಸ್ ಕಾಲನಿಯ ಎಲ್ಲ ಬಂಧುಗಳಿಗೆ ಸಲ್ಲುತ್ತದೆ ಎಂದರು.

ಕಾಲೋನಿ ಸಣ್ಣದಾಗಿದ್ದರೂ ಮನಸ್ಸುಗಳು ಬಹಳ ದೊಡ್ಡವು. ಕಾಲೋನಿಯ ಎಲ್ಲ ಬಂಧುಗಳು ಗುಪ್ತ ದಾನ ಮಾಡಿ ಸಪ್ತ ದೇವತೆಗಳ ನಿರ್ಮಾಣ ಮಾಡಿದ್ದು ಬದುಕನ್ನು ಹಸನ ಮಾಡಿಕೊಂಡಿದ್ದೀರಿ. ಇದು ಭಗವಂತ ಮೆಚ್ಚು ಕೆಲಸ ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ, ನಿವೃತ್ತ ಉಪಪೋಲಿಸ್ ಆಯಕ್ತ ಸುಭಾಷ್ ಗುಡಿಮನಿ, ಬ್ಯಾಂಕರ್ಸ್ ಕಾಲೋನಿ ಈಗ ಸುಕ್ಷೇತ್ರ ಬ್ಯಾಂಕರ್ಸ್ ಕಾಲೋನಿ ಆಗಿದೆ, ನಿಮ್ಮೆಲ್ಲರ ತನು ಮನ ಧನ ಸಹಾಯ ಆರ್ಶೀವಾದ ನಮಗೆ ದೇವಸ್ಥಾನ ನಿರ್ಮಿಸಲು ಸಹಾಯವಾಗಿದೆ. ಇದು ಸುಂದರ ಮತ್ತು ಜಾಗೃತ ದೇವಸ್ಥಾನವಾಗಿ ಹೊರಹೊಮ್ಮಿದೆ, ಸಕಲ ಸದ್ಭಕ್ತರು ದಿನ ನಿತ್ಯ ಸಪ್ತ ದೇವತೆಗಳ ದರ್ಶನ ಪಡೆದು ಸಂಕಲ್ಪ ಮಾಡಿಕೊಂಡು ಪುನೀತರಾಗಿ, ವರ್ಷವಿಡಿ ಯಾವುದೇ ದೇವತಾ ಕಾರ್ಯಗಳು ಮಾಡಲು ಮುಕ್ತವಾಗಿದೆ ಎಂದರು.
ಬ್ಯಾಂಕರ್ಸ್ ಕಾಲೋನಿಯಲ್ಲಿ ಕುಂಭ ಮೆರವಣಿಗೆ ಮಾಡಿ, ವರಸಿದ್ಧಿ ವಿನಾಯಕ, ಆಂಜನೇಯ, ನಂದಿ ಲಿಂಗೇಶ್ವರ, ನಾಗದೇವತೆ, ನವಗ್ರಹ, ಬನ್ನಿಮಹಾ ಕಾಳಿ, ತುಳಸಿಮಾತಾ ಸಪ್ತದೇವತೆಗಳ ಪ್ರಾಣ ಪ್ರತಿಷ್ಠಾಪನೆ ಜರುಗಿತು.
ನ್ಯಾಯವಾದಿ ಸುರೇಶ ಹಕ್ಕಿ, ರಾಜು ಹಿರೇಮಠ, ಎಂ. ಎಸ್. ಪಾಟೀಲ ಮಾತನಾಡಿದರು.
ಬ್ಯಾಂಕರ್ಸ್ ಕಾಲೋನಿಯ ಅಧ್ಯಕ್ಷ ಶಶಿಧರ ರೋಡಗಿ, ಅಪ್ಪಣ್ಣ ಬಡಿಗೇರ, ಅಮೋ ವಾಲೀಕಾರ, ನಾಗಯ್ಯ ಹಿರೇಮಠ, ಸಜ್ಜನ, ರವಿ ಹುಲ್ಲಣ್ಣವರ, ವೈ. ಡಿ. ದೇಶಪಾಂಡೆ, ಅಶೋಕ ಕಲಶೆಟ್ಟಿ, ಸಂಗಮೇಶ ವಾಲಿ, ಆನಂದ ಪಾಟೀಲ, ಶೋಭಾ ಜಹಾಂಗೀರದಾರ, ಜಯಶ್ರೀ ಗುಡಿಮನಿ, ಜಲಜಾಕ್ಷಿ ಮೇತ್ರಿ, ಕವಿತಾ ಹಿರೇಮಠ, ರಮೇಶ ಪಾಟೀಲ ಉಪಸ್ಥಿತರಿದ್ದರು.
\