ಜಿಲ್ಲೆ

ವಯಸ್ಸಿನ ಆಕರ್ಷಣೆಗೆ ಒಳಗಾಗಿ ದಾರಿ ತಪ್ಪದಿರಿ

ಮಳವಳ್ಳಿ: ಬಾಲ್ಯದ ದಿನಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಯಸ್ಸಿನ ಆಕರ್ಷಣೆಗಳಿಗೆ ಒಳಗಾಗಿ ದಾರಿ ತಪ್ಪಿದರೆ ಭವಿಷ್ಯದ ಜೀವನಸಲ್ಲಿ ಕಷ್ಟಕರ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಹಲಗೂರು ಸಿಪಿಐ ಬಿ.ಎಸ್. ಶ್ರೀಧರ್ ಎಚ್ಚರಿಸಿದರು.


ಪಟ್ಟಣದ ಸಿದ್ದಾರ್ಥ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಪ್ರೌಢಶಾಲಾ ವಿಭಾಗದ ಸಂಸ್ಕೃತ ಪಾಠಶಾಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಮಕ್ಕಳ ಹಕ್ಕುಗಳ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕಾಗಿದ್ದು, ಎಲ್ಲರೂ ತಪ್ಪದೆ ಕಲಿಕೆಗೆ ಒತ್ತು ನೀಡುವಂತೆ ಸಲಹೆ ನೀಡಿದರು. ಮಕ್ಕಳು ಪ್ರೌಢಾವಸ್ಥೆಗೆ ಬರುವ ಮೊದಲು ಹದಿಹರೆಯದ ಕೆಟ್ಟ ಆಲೋಚನೆಗಳಿಗೆ ಒಳಗಾಗಿ ಬದುಕಿನ ಸುಂದರ ಕ್ಷಣಗಳನ್ನು ಹಾಳುಮಾಡಿಕೊಳ್ಳದಿರಿ ಎಂದರು. ವಿದ್ಯಾರ್ಥಿ ದಿಸೆಯಲ್ಲಿ ಶೈಕ್ಷಣಿಕ ಕಲಿಗಷ್ಟೇ ಆಸಕ್ತಿ ತೋರುವ ಮೂಲಕ ದೇಶಕ್ಕೆ ಉತ್ತಮ ಪ್ರಜೆಗಳಾಗುವಂತೆ ಕರೆ ನೀಡಿದರು.


ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧಿಕಾರಿಗಳಾದ ಕೆ.ಎಂ. ಮಹದೇವು, ಸಿ.ಬಿ.ರಾಜೇಂದ್ರ, ಕಾಲೇಜು ಪ್ರಾಂಶುಪಾಲ ಕೆಂಪದಾಸೇಗೌಡ, ಉಪನ್ಯಾಸಕರಾದ ಎಚ್.ಕೆ.ರಘು, ಎಸ್. ಲಕ್ಷ್ಮೀ, ಎಂ.ಸುಗುಣಾ ಸೇರಿದಂತೆ ಇತರರಿದ್ದರು.