ಜಿಲ್ಲೆ

ವನಿತಾ ಸೇವಾ ಸಮಾಜ ಸಂಸ್ಥೆಯ ಕಾರ್ಯ ಶ್ಲಾಘನೀಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ಶತಮಾನದ ಇತಿಹಾಸ ಇರುವ ಮಾತೋಶ್ರೀ ಭಾಗೀರಥಿಬಾಯಿ ಅವರಿಂದ ಸ್ಥಾಪಿತ ವನಿತಾ ಸೇವಾ ಸಮಾಜ ಮಹಿಳಾ ಶಿಕ್ಷಣ ಹಾಗೂ ನಿರ್ಗತಿಕ ಮಹಿಳೆಯರ ಸಬಲೀಕರಣಕ್ಕೆ ಅವಿರತವಾಗಿ ಶ್ರಮಿಸುತ್ತಿದೆ ಎಂದು ಹು- ಧಾ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹೇಳಿದರು.
ನಗರದ ವನಿತಾ ಸೇವಾ ಸಮಾಜದ ವನಿತಾ ಪ್ರಾಥಮಿಕ, ಪ್ರೌಢಶಾಲೆ, ಭಾಗೀರಥಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ವಹಿಸಿ ಪಾಲ್ಗೊಂಡು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಸಂಸ್ಥೆಯ ನಿರ್ದೆಶಕರಾದ ದಾನಪ್ಪ ಕಬ್ಬೇರ, ಸಂತೋಷ ಹುಲ್ಲೂರ, ಮಧುರಾ ಹೆಗಡೆ, ಪರಿಮಳಾ ಶೆಟ್ಟಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಐ.ಎಚ್. ಪೂಜಾರ ಸ್ವಾಗತಿಸಿದರು. ಸುಮಾ ರಜಪೂತ ವಂದಿಸಿದರು. ದೈಹಿಕ ಶಿಕ್ಷಕಿ ಶಿಲ್ಪಾ ಚವರಿ ಕ್ರೀಡಾಕೂಟ ಸಂಯೋಜಿಸಿದರು. ಅಂಕಿತಾ ಚಾಬುಕಸವಾರ ನಿರ್ವಹಿಸಿದರು.