ಕಲಬುರಗಿ: ಛಲವಾದಿ, ಬುದ್ಧಿಸ್ಟ್ ವಧು-ವರರ ಮಾಹಿತಿ ಸೇವಾ ಸಂಘದಿAದ ನಗರದ ರಾಜಾಪುರ ಬಡಾವಣೆಯ ಬುದ್ಧ ವಿಹಾರದಲ್ಲಿ ರಾಜ್ಯ ಮಟ್ಟದ ಪರಿಶಿಷ್ಟ ಜಾತಿ(ಛಲವಾದಿ ಬುದ್ಧಿಸ್ಟ್) ವಧು ವರರ ಸಮಾವೇಶ ಏ.೧೧ರಂದು ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಶಿವಲಿಂಗಪ್ಪ ಕಲಕೇರಿ ತಿಳಿಸಿದರು. ಈಗಾಗಲೇ ೫೮೨ ವಧು ವರರು ನೋಂದಣಿ ಮಾಡಿಕೊಂಡಿದ್ದಾರೆ. ಆಸಕ್ತರು ನಗರದ ನ್ಯೂ ಜೇವರ್ಗಿ ರಸ್ತೆಯ ಸೂಪರ್ ಕಿಂಗ್ ಕಾಂಪ್ಲೆಕ್ಸ್ನಲ್ಲಿನ ಸಂಘದ ಕಚೇರಿಯಲ್ಲಿ ನಿತ್ಯ ಬೆಳಗ್ಗೆ ೧೦ರಿಂದ ಸಂಜೆ ೫ವರೆಗೆ ನೋಂದಣಿ ಮಾಡಿಸಬಹುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದುವರೆಗೆ ೬೮ ವರಗಳು ಹಾಗೂ ೭೨ ವಧುಗಳ ವಿವಾಹ ಸಂಪನ್ನ ಮಾಡಲಾಗಿದೆ. ಮಾಹಿತಿಗೆ ೯೯೦೦೬ ೭೮೮೫೦, ೯೪೪೮೬ ೦೪೮೫೧ ಸಂಪರ್ಕಿಸಬಹುದು ಎಂದು ಹೇಳಿದರು. ಕಾಳಪ್ಪ ಕೆಂಭಾವಿ, ಶಂಕರ ಕಡಂಗೆ, ಪ್ರಕಾಶ ಕಮಲಾಪುರ ಇದ್ದರು.