ಹುಬ್ಬಳ್ಳಿ: ಶ್ರೀ ರಾಮ ನವಮಿ ನಿಮಿತ್ತ ಏ. 6ರಂದು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿನ ವಧಾಲಯಗಳು ಹಾಗೂ ಎಲ್ಲ ಮಾಂಸ ಮಾರಾಟದ ಅಂಗಡಿಗಳನ್ನು ಬಂದ್ ಇರುವಂತೆ ಹು-ಧಾ ಮಹಾನಗರ ಪಾಲಿಕೆ ಸೂಚಿಸಿದೆ.
ಅಂದು ಮಾಂಸದ ಅಂಗಡಿಗಳನ್ನು ತೆರೆದಿದ್ದಲ್ಲಿ ಪಾಲಿಕೆಯಿಂದ ಅವರ ಲೈಸೆನ್ಸ ರದ್ದು ಪಡಿಸಿ, ಸರ್ಕಾರದ ನಿಯಮಗಳನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆಯ ಮುಖ್ಯ ಪಶು ವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.