ಚಿಕ್ಕೋಡಿ: ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ದೊಡ್ಡಹಳ್ಳಕ್ಕೆ ನಿರ್ಮಿಸಿರುವ ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ವಡ್ರಾಳ ಕೆರೆಗೆ ಮಂಗಳವಾರ ಬಾಗಿನ ಅರ್ಪಿಸಿ ಮಾತನಾಡಿ, ಈ ಬಾರಿ ಉತ್ತಮ ಮಳೆಯಿಂದ ವಡ್ರಾಳ ಕರೆ ಭರ್ತಿಯಾಗಿದೆ. ಅಲ್ಲಿಂದ ಹರಿದು ಬಂದ ನೀರಿನಿಂದ ಹಳ್ಳಗಳಿಗೆ ನಿರ್ಮಿಸಿರುವ ಬಾಂದಾರಗಳು ಭರ್ತಿಯಾಗಿ ರೈತರಲ್ಲಿ ಸಂತಸ ತಂದಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿ, ಕೆರೆಯಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೀರಿನ ಚಿಂತೆಯಿಂದ ಮುಕ್ತರಾಗಿದ್ದಾರೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂಚಾಕ್ಷರಿ ಹಳಿಜೋಳೆ, ಉಪಾಧ್ಯಕ್ಷೆ ಕಲ್ಪನಾ ಪವಾರ, ಸದಾಶಿವ ಘೋರ್ಪಡೆ, ಬಾಳು ಮುಗಳಿ, ದುಂಡಯ್ಯ ಸ್ವಾಮಿ, ವಿಜಯಕುಮಾರ ಕೋಟಿವಾಲೆ ತರರು ಇದ್ದರು.