ಜಿಲ್ಲೆ

ವಡಗೇರಾ ಪಿಡಿಒ ವರ್ಗಾವಣೆಗೆ ಆಗ್ರಹ

ವಡಗೇರಾ : ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಬರೀ ರಾಜಕೀಯ ಮಾಡುತ್ತಿರುವ ವಡಗೇರಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಸರ್ವ ಸದಸ್ಯರು ಒತ್ತಾಯಿಸಿದ್ದಾರೆ.

ಅಧ್ಯಕ್ಷ-ಉಪಾಧ್ಯಕ್ಷರ ನೇತೃತ್ವದಲ್ಲಿ ಎಲ್ಲ ಸದಸ್ಯರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರೀಮಾ ಪನ್ವಾರ್ ಅವರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿ, ಪಿಡಿಒ ಅವರ ವರ್ತನೆಯಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಅಲ್ಲದೆ ಎಲ್ಲ ಸದಸ್ಯರನ್ನು ಅವರು ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಪಂನ ಪ್ರತಿ ವಾರ್ಡ್ನಲ್ಲಿ ನೀರು, ಚರಂಡಿ, ಬೀದಿ ದೀಪದ ಸಮಸ್ಯೆ, ಕೂಲಿ ಕಾರ್ಮಿಕರ ಉದ್ಯೋಗ ಖಾತ್ರಿ, ರೈತರ ಹೊಲಗಳಿಗೆ ಹೋಗುವ ರಸ್ತೆ, ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೀಗೆ ಹತ್ತು ಹಲವಾರು ಸಮಸ್ಯೆಗಳಿದ್ದು, ಇವುಗಳಿಗೆ ಸ್ಪಂದಿಸದೆ ಉಡಾಫೆ ಉತ್ತರ ನೀಡುತ್ತಿದ್ದಾರೆ.
ಇದರಿಂದ ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹೀಗಾಗಿ ಕೂಡಲೇ ಅವರನ್ನು ವರ್ಗಾವಣೆ ಮಾಡಿ ಬೇರೊಬ್ಬ ದಕ್ಷ ಹಾಗೂ ಕೆಲಸಗಾರ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಒಂದು ವಾರದ ಒಳಗೆ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಮನವಿಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಗ್ರಾಪಂ ಅಧ್ಯಕ್ಷ ಅಶೊಕ ಸಾಹು ಕರಣಿಗಿ, ಉಪಾಧ್ಯಕ್ಷೆ ರಂಗಮ್ಮ ಹುಲಿ, ಸದಸ್ಯರಾದ ನರಸಮ್ಮ ಬುಸೇನಿ, ಯಲ್ಲಮ್ಮ ಪೂಜಾರಿ, ನಾಗಪ್ಪ, ಅಬ್ದುಲ್ ಭಾಷಾ ಕತಾಲಿ, ಶ್ರೀದೇವಿ, ನಾಗಪ್ಪ ನಸಲಾಯಿ, ಚಂದಮ್ಮ ಡುರ್ರೆ, ತಾಯಮ್ಮ ನೀಲಹಳ್ಳಿ, ಸಿದ್ದಪ್ಪ ತಮ್ಮಣ್ಣೋರ, ರೇಣುಕಾ ಗೋನಾಲ, ಶರಣಪ್ಪ ಕುರಿ, ಸಿದ್ದಮ್ಮ, ಶಹೀನಾ ಬೇಗಂ, ಎಸ್.ಚನ್ನಪ್ಪ, ಈರಮ್ಮ, ರಾಜಕುಮಾರ, ಮಲ್ಲಮ್ಮ, ಲಕ್ಷö್ಮಣ ನಾಯಕ, ಲಲಿತಾ, ಮಂಗಿಬಾಯಿ ಬಸವರಾಜ, ಸಿದ್ರಾಮರೆಡ್ಡಿ ಕೋನಹಳ್ಳಿ, ಸೈದಪ್ಪ ಮಾಸ್ಟರ್, ಅಯ್ಯಮ್ಮ ಚಟ್ಟಹಳ್ಳಿ, ಆಸ್ಮಾ ಬೇಗಂ ಕೋನಹಳ್ಳಿ ಇದ್ದರು.