ವಿಜಯಪುರ: ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರಸಕ್ತ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ಕುರಿತ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀೆ ಹಮ್ಮಿಕೊಳ್ಳಲಾಗಿದೆ. ಪರೀಕ್ಷೆಗೆ ಇಂದಿನಿಂದ ಫೆ. 28 ರವರೆಗೆ ನೋಂದಣಿಗೆ ಅವಕಾಶವಿದ್ದು, ಆಸಕ್ತರು ಭಾಗವಹಿಸಿ ಬಹುಮಾನ ಗೆಲ್ಲಬಹುದು ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯ ಶ್ರೀನಾಥ ಪೂಜಾರಿ ಹೇಳಿದರು.
ಕಳೆದ ಮೂರು ವರ್ಷಗಳಿಂದ ನಮ್ಮ ಸಂಟನೆ ವತಿಯಿಂದ ಅಂಬೇಡ್ಕರ್ ಅವರ ವಿಚಾರಧಾರೆಗಳು, ಅವರ ವ್ಯಕ್ತಿತ್ವ, ಭಾರತಕ್ಕೆ ಸಂವಿಧಾನ ಸಿದ್ಧಪಡಿಸಲು ಅವರು ಹಾಕಿರುವ ಶ್ರಮ ಹಾಗೂ ಅವರ ಜೀವನದ ಬಗ್ಗೆ ಸಾರ್ವಜನಿಕರಲ್ಲಿ ಇನ್ನು ವಿಶೇಷವಾಗಿ ಯುವ ಜನತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪರೀಕ್ಷೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಸ್ಪರ್ಧಾತ್ಮಕ ಪರೀೆಗಳು ಒಟ್ಟು 125 ಅಂಕಗಳ ವಸ್ತು ನಿಷ್ಠ (ಅಬ್ಜೆಕ್ಟಿವ್) ಮಾದರಿಯಲ್ಲಿ ನಡೆಯುತ್ತದೆ. ಅದರಲ್ಲಿ 100 ಪ್ರಶ್ನೆಗಳು ಕೇವಲ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪ್ರಶ್ನೆಗಳಾಗಿದ್ದರೆ, ಇನ್ನುಳಿದ 25 ಪ್ರಶ್ನೆಗಳು ಸಂವಿಧಾನದ ಕುರಿತಾಗಿದ್ದು, ಪ್ರತಿ ನಾಲ್ಕು ತಪ್ಪು ಉತ್ತರಗಳಿಗೆ 1 ಸರಿ ಅಂಕವನ್ನು ಕಡಿತಗೊಳಿಸಲಾಗುತ್ತದೆ ಎಂದು ವಿವರಿಸಿದರು.
ಈ ವರ್ಷ 6 ಲ ರೂ. ಬಹುಮಾನದ ಮೊತ್ತ ಇರಿಸಲಾಗಿದ್ದು, ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 3 ಲ ರೂ., ದ್ವೀತಿಯ ಸ್ಥಾನಕ್ಕೆ 2 ಲ ರೂ. ಮತ್ತು ತೃತೀಯ ಬಹುಮಾನವಾಗಿ 1 ಲ ರೂ. ಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ (ಡಿಡಿಡಿ.ಞಢಛಡಟ.ಟ್ಟಜ) ವೆಬ್ ಸೈಟ್ಗೆ ಭೇಟಿ ನೀಡಬಹುದಾಗಿದ್ದು, ಇಲ್ಲವೆ, ಮೊ. 9380678859 ಕ್ಕೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಮುಖಂಡರಾದ ಬಾಲಾಜಿ ಕಾಂಬ್ಳೆ, ಮಹಾದೇವ ಚಲವಾದಿ, ಯಮನಪ್ಪ, ಮಲ್ಲು ಕುಂಬಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.