ಜಿಲ್ಲೆ

ವಚನಗಳಿಗೆ ಮರುಜೀವ ಕೊಟ್ಟವರು ಹಳಕಟ್ಟಿಯವರು

ಬಾಗಲಕೋಟ: ಕಲ್ಯಾಣ ಕ್ರಾಂತಿಯಿಂದಾಗಿ ಅಲ್ಲಲ್ಲಿ ಹುದುಗಿಹೋಗಿದ್ದ ಶರಣರ ವಚನಗಳನ್ನು ಗುರುತಿಸಿ ಹೊರತಂದು ಮರುಜೀವ ನೀಡಿದವರು ಫ.ಗು.ಹಳಕಟ್ಟಿಯವರು ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂಸ್ಕರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ಮೋಡಿಲಿಪಿ ಸಂಸ್ಕøತ ಹಳೆಗನ್ನಡ ಗ್ರಂಥ ಭಾಷೆಗಳಲ್ಲಿ ಪುರಾಣ, ಕಥೆ, ಕವನಗಳಿದ್ದು, ಜನರಿಗೆ ಅವೆಲ್ಲ ಕಬ್ಬಿಣದ ಕಡಲೆಗಳಾಗಿದ್ದವು. ಸುಲಿದ ಬಾಳೆಹಣ್ಣಿನಂತ ಅಚ್ಚ ಕನ್ನಡದಲ್ಲಿ ರಚಿಸಲ್ಪಟ್ಟ ಶರಣರ ವಚನಗಳು ಜನರಿಗೆ ತಲುಪಿ ಅರಿವು, ಆಚಾರ, ಲಿಂಗ, ಜಂಗಮ ದಾಸೋಹಗಳಂತ ವಿಚಾರಗಳು ಬಳಕೆಯಾಗತೊಡಗಿದವು. ಅಂಥ ವಚನಗಳನ್ನು ಗುರುತಿಸಿ ಹೊರತಂದು ಮರು ಮುದ್ರಣ ಮಾಡಿ ಜನರಿಗೆ ತಲುಪಿಸುವ ಮಹಾನ ಕಾರ್ಯ ಮಾಡಿದವರು ಹಳಕಟ್ಟಿಯವರು ಎಂದರು.

ಹಳಕಟ್ತಿಯವರು ದಿನಪತ್ರಿಕೆ ಸಂಪಾದಕರಾಗಿ ಬರಹಗಾರರಾಗಿ ಸಾಹಿತಿಗಳಾಗಿ ಗುರುತಿಸಿಕೊಂಡವರು. ವಿಜಯಪುರದ ಹಲಸಂಗಿ ಗೆಳೆಯರಬಳಗದಲ್ಲಿ ಇವರೂ ಒಬ್ಬರಾಗಿದ್ದರು. ಅನೇಕ ಈ ವಚನಗಳ ಪ್ರಾಮುಖ್ಯತೆ ಅರಿತು ಹೇಗಾದರು ಸರಿ ಇವುಗಳನ್ನು ಜನರಿಗೆ ತಲುಪಿಸುವ ಕಾರ್ಯಮಾಡಬೇಕೆಂದು ನಿರ್ಧರಿಸಿ ವಚನಗಳ ಮುದ್ರಣಕ್ಕೆ ಧಾರವಾಡಕ್ಕೆ ಹೋಗಿ ಒಂದು ಕ್ರಿಸ್ಚನ್ ಮುದ್ರಣಾಲಯದಲ್ಲಿ ಮುದ್ರಿಸಲು ಕೊಟ್ಟಾಗ ಅಲ್ಲಿಯ ಕ್ರಿಸ್ಚನ್ ವ್ಯಕ್ತಿ ಈ ವಚನಗಳ ಅರ್ಥಕಂಡು ತಮ್ಮ ಧರ್ಮ ಪ್ರಚಾರಕ್ಕೆ ಅಡಚಣಿಉಂಟಾಗಬಹುದೆಂದು ಮುದ್ರಿಸಲು ಆಗುವದಿಲ್ಲ ಎಂದು ಮರಳಿಕಳಿಸಿದಾಗ ತಮ್ಮ ಮನೆಯನ್ನೇ ಮಾರಿ ಬಂದ ಹಣದಲ್ಲಿ ಮುರ್ದಣಾಲಯ ಪ್ರಾರಂಭಿಸಿ ವಚನಗಳಿಗೆ ಹೊಸವಿನ್ಯಾಸ ಕೊಟ್ಟರು ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಮಂಜುನಾಥ ಜುನಗೊಂಡ ಮಾತನಾಡಿ ಫ.ಗು.ಹಳಕಟ್ಟಿಯವರು ವಚನ, ವಚನಕಾರರು ಮತ್ತು ಕನ್ನಡ ಸಾಹಿತ್ಯ ಪ್ರಕಟಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ನೇಪತ್ಯಕ್ಕೆ ಸರಿಹೋಗಬೇಕಾಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು. ಬಿಡುವಾದಾಗಲೆಲ್ಲ ಹಲವು ಸಂಘ ಸಂಸ್ಥೆಗಳನ್ನು ಕೂಡಾ ಸ್ಥಾಪಿಸಿದರು. ಅವುಗಳಲ್ಲಿ ಬಹಳಷ್ಟು ಸಂಸ್ಥೆಗಳು ಇಂದು ಶತಮಾನೋತ್ಸವ ಆಚರಿಸಿಕೊಂಡಿವೆ. ವಿಜಯಪುರದ ಬಿ.ಎಲ್.ಡಿ ಸಂಸ್ಥೆ, ಸಿದ್ದೇಶ್ವರ ಅರ್ಬನ್ ಬ್ಯಾಂಕ್, ನೇಕಾರ, ಕೃಷಿಕರ ಅಬ್ಯುದಯಕ್ಕಾಗಿ ಸ್ಥಾಪಿಸಿದ ಸಂಸ್ಥೆಗಳಾಗಿದ್ದು, ಇಂದಿಗೂ ಅಸ್ಥಿತ್ವದಲ್ಲಿವೆ ಎಂದರು.

ಕರ್ನಾಟಕ ಏಕೀಕರಣದ ರೂವಾರಿಗಳಾಗಿರುವ ಇವರು ಪ್ರತಿಭಾವಂತ ವಕೀಲರಾಗಿದ್ದರು. ವಚನಗಳನ್ನು ಹೊರತರಲು ತಮ್ಮ ಇಡೀ ಜೀವನ ಮೀಸಲಿಟ್ಟು ಬಡತನ ಭವನೆಯಿಂದ ಬಳಲಿದವರು. ಗೌರವ ಡಾಕ್ಟರೇಟ್ ಪಡೆಯಲು ಹೋದಾಗ ಹರಿದ ಅಂಗಿ ಅದರ ಮೇಲೆ ಕೋರ್ಟಧರಿಸಿದ್ದಾಗ ಕೋರ್ಟ ತೆಗೆಯಿರಿ ಎಂದು ಸಂಯೋಜಕರು ಹೇಳಿದಾಗ ಇಲ್ಲ ನನ್ನ ಅಂಗಿ ಹರಿದಿದೆ ಎಂದು ಹೇಳಿದಾಗ ಇಂಥ ಮಹಾನ್‍ವ್ಯಕ್ತಿ ಕಾರ್ಯಕ್ಕೆ ಮಂತ್ರ ಮುಗ್ದರಾದರು ಎಂದರು.
ಕಾರ್ಯಕ್ರಮದಲ್ಲಿ ಡಾ.ಎಂ.ಎಸ್.ದಡ್ಡೇನವರ, ಎಸ್.ವಿ.ಚವಡಾಪೂರ, ಸುರೇಶ ಉಕ್ಕಲಿ, ಇಂದಿರಾ ನಾರಾ, ಗಿರಿಜಾ ಚಂದ್ರಶೇಖರ ಸೇರಿದಂತೆ ಇತರರು ಉಪಸ್ಥಿತರಿದ್ದರು.