ಹುಮನಾಬಾದ್: ಬಸವಾದಿ ಶರಣರ ವಚನಗಳಲ್ಲಿ ವಿಶ್ವಸಂಸ್ಥೆ ಘೋಷಿಸಿದ ಎಲ್ಲ ಮಾನವ ಹಕ್ಕು ವಿಚಾರಗಳು ಸೇರಿವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶರತಕುಮಾರ ನಾರಾಯಣಪೇಟಕರ್ ಹೇಳಿದರು.
ಪಟ್ಟಣದ ಸರ್ವೋದಯ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ೪೫ನೆಯ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ನಿಮಿತ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಬಸವಣ್ಣನವರು ನೀಡಿರುವ ಪ್ರಜಾಪ್ರಭುತ್ವ ವಚನ ಸಾಹಿತ್ಯವನ್ನು ಅರಿತು ನಾವೆಲ್ಲರೂ ಬಾಳಬೇಕಾಗಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ಪ್ರಜ್ವಲ್ ಯಲಾಲ್, ಪ್ರಮುಖರಾದ ಬಸವರಾಜ ರುದ್ರವಾಡಿ, ಚನ್ನಬಸಪ್ಪ ವಡ್ಡನಕೇರಾ, ನಾಗಯ್ಯ ಸ್ವಾಮಿ, ಸುನೀತಾ ಪಾಟೀಲ್, ಶಂಭುಲಿಂಗ ಪಾಟೀಲï, ಮಲ್ಲಿಕಾರ್ಜುನ ಸಂಗಕರ್, ಶೋಭಾ ಔರಾದೆ, ಕಲಾವತಿ ವರ್ತುಳೆ, ಪ್ರಭಾವತಿ ಮುಲಗೆ, ಭುವನೇಶ್ವರಿ ಪಾಟೀಲ್, ಗೌರಮ್ಮ ಬಾಲಕುಂದೆ, ಸವಿತಾ ಹೂಗಾರ, ಸಾರಿಕಾ ಗಂಗಾ ಇದ್ದರು.
೬ರಿಂದ ೧೦ನೇ ತರಗತಿವರೆಗಿನ ಪ್ರೌಢ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಲಕ್ಷ್ಮೀ ವೀರಶೆಟ್ಟಿ ಪ್ರಥಮ, ಸಪ್ನಾ ಅಶೋಕ್ ದ್ವಿತೀಯ, ಭಾಗ್ಯಶ್ರೀ ಸಂತೋಷ ತೃತೀಯ, ವಚನ ಗಾಯನದಲ್ಲಿ ಸಿನೋಜ್ ಸತೀಶ್ ಪ್ರಥಮ, ಸಪ್ನಾ ಅಶೋಕ್ ದ್ವಿತೀಯ, ವಚನಶ್ರೀ ಶಂಭುಲಿಂಗ ಪಾಟೀಲ್ ತೃತೀಯ, ವಚನ ಭಾಷಣದಲ್ಲಿ ಲಕ್ಷ್ಮೀ ವೀರಶೆಟ್ಟಿ ಪ್ರಥಮ, ಸಂಗೀತಾ ರಾಮಣ್ಣ ದ್ವಿತೀಯ, ಪವಿತ್ರಾ ಶಾಮರಾವ್ ತೃತೀಯ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಪ್ನಾ ಅಶೋಕ್, ಲಕ್ಷ್ಮೀ ಸಂತೋಷ, ಭಾಗ್ಯಶ್ರೀ ಸಂತೋಷ, ಆದರ್ಶ ಸುನೀಲ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಎರಡನೇ ವಿಭಾಗ ಪದವಿಪೂರ್ವ ಹಾಗೂ ಪದವಿಯ ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆಯಲ್ಲಿ ರೋಹಿಣಿ ಬಿರಾದಾರ್ ಪ್ರಥಮ, ಶಿವಾನಿ ಅಮೃತ್ ದ್ವಿತೀಯ, ನವೀನ್ ಅಣ್ಣಪ್ಪ ತೃತೀಯ. ವಚನ ಗಾಯನದಲ್ಲಿ ಮಹೇಶ್ ಬಸವರಾಜ ಪ್ರಥಮ, ಪ್ರಿಯಂಕಾ ವೈಜಿನಾಥ ದ್ವಿತೀಯ, ಶ್ರುತಿ ಶಿವಶರಣ ತೃತೀಯ, ವಚನ ಭಾಷಣದಲ್ಲಿ ಮಹೇಶ್ ಬಸವರಾಜ ಪ್ರಥಮ, ಪ್ರಿಯಾಂಕ ವೈದ್ಯನಾಥ ದ್ವಿತೀಯ, ಅರ್ಪಿತಾ ರಾಮಣ್ಣ ತೃತೀಯ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಹೇಶ್ ಬಸವರಾಜ, ನವೀನ್ ಅಣ್ಣೆಪ್ಪ, ರೋಹಿಣಿ ಬಿರಾದಾರ್ ಹಾಗೂ ಅಜಯ್ ಪ್ರಭು ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ನ.೧೬ರಂದು ಬಸವಕಲ್ಯಾಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಯೋಜಕ ನಾಗಯ್ಯ ಸ್ವಾಮಿ ತಿಳಿಸಿದ್ದಾರೆ. ಈ ಎಲ್ಲ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದವರಿಗೆ ೧೦೦೦ ರೂ., ದ್ವಿತೀಯ ೫೦೦, ತೃತೀಯ ಬಂದವರಿಗೆ ೩೦೦ ರೂ. ಬಹುಮಾನದ ಜತೆಗೆ ಪ್ರಮಾಣಪತ್ರ ವಿತರಿಸಲಾಯಿತು.