ಮುನವಳ್ಳಿ: ವಿದ್ಯಾರ್ಥಿಗಳು ಶರಣರ ವಚನಗಳ ಆಶಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸವದತ್ತಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯ ಉಮೇಶ ಬಾಳಿ ಹೇಳಿದರು.
ಪಟ್ಟಣದ ಎಂ.ಎಲ್.ಇ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸವದತ್ತಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಸಂಸ್ಥಾಪಕ ಸುತ್ತೂರು ಜಗದ್ಗುರು ಲಿಂ. ಡಾ.ರಾಜೇಂದ್ರ ಸ್ವಾಮೀಜಿ ಜನ್ಮದಿನದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ವಚನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವಗುರು ಬಸವಣ್ಣ, ಆಕ್ಕಮಹಾದೇವಿ, ಅಲ್ಲಮಪ್ರಭುಗಳ ಸಂದೇಶ ಸಾರ್ವಕಾಲಿಕ ಎಂದರು.
ಉಪನ್ಯಾಸಕ ಎಂ.ಎಚ್. ಪಾಟೀಲ, ವಚನಗಳು ಜೀವನಾನುಭವ ಆಧರಿಸಿದ ಸಾಹಿತ್ಯವಾಗಿದ್ದು, ಇಂದಿಗೂ ಪ್ರಸ್ತುತವಾಗಿವೆ ಎಂದರು. ವಚನ ಗಾಯನ ಕಂಠಪಾಠ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸವದತ್ತಿ ತಾಲೂಕು ಕದಳಿ ವೇದಿಕೆ ಅಧ್ಯೆ ಎ.ಪಿ. ಲಂಬೂನವರ, ಶಿಕರಾದ ಬಿ.ಬಿ.ಹುಲಿಗೊಪ್ಪ, ವೆ.ಬಿ.ಕಡಕೋಳ, ಬಾಳು ಹೊಸಮನಿ, ಮುಖ್ಯೋಪಾಧ್ಯಾಯ ಎ.ವಿ. ರೋಣದ, ಎ.ವಿ. ನರಗುಂದ, ಎಂ.ಎಸ್. ಬಾನಿ. ಕಿರಣ ನಾಯ್ಕರ, ರಾಜಶೇಖರ ಮಲ್ಲಾಪೂರಮಠ, ನಿರ್ಮಲಾ ಗದ್ವಾಲ್ ಇತರರಿದ್ದರು.