ಜಿಲ್ಲೆ

‘ವಚನ ಹೃದಯ’ ಕೃತಿ ಬಿಡುಗಡೆ ನಾಳೆ

ಗುಂಡ್ಲುಪೇಟೆ: ಪಟ್ಟಣದ ಗುರುಭವನದಲ್ಲಿ ಡಿ.17ರ ಸಂಜೆ 5 ಗಂಟೆಗೆ ಧಾರವಾಡದ ಮನಗಂಡಿಯ ಶ್ರೀ ಬಸವಾನಂದಸ್ವಾಮೀಜಿ ಬರೆದಿರುವ ‘ವಚನ ಹೃದಯ’ಕೃತಿ ಬಿಡುಗಡೆಯಾಗಲಿದೆ ಎಂದು ಬಿಎಸ್‌ಎನ್ ಸ್ನೇಹಬಳಗದ ಬಿ.ಎಸ್.ನಾಗೇಂದ್ರ ತಿಳಿಸಿದರು.

2010ರಲ್ಲಿ ಪಟ್ಟಣ ಹಾಗೂ ಚಾಮರಾಜನಗರ ತಾಲೂಕು ಕೇಂದ್ರಗಳಲ್ಲಿ ಉಪವಾಸದ ಮಹತ್ವ ತಿಳಿಸುವ ಸಲುವಾಗಿ ಒಂದು ತಿಂಗಳ ಶಿಬಿರ ನಡೆಸಿ ಸಾವಿರಾರು ಜನರ ಜೀವ ಹಾಗೂ ಜೀವನಶೈಲಿಯನ್ನು ಉತ್ತಮಗೊಳಿಸಿದ್ದ ನಿಸರ್ಗ ಚಿಕಿತ್ಸಾ ತಜ್ಞರಾದ ಶ್ರೀಗಳು ತಮ್ಮ ವಚನ ಹೃದಯ ಕೃತಿಯನ್ನು ಬಿಡುಗಡೆ ಮಾಡುವ ಜತೆಗೆ ಪ್ರವಚನವನ್ನೂ ನೀಡಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಡಗೂರು ಅಡವಿ ಮಠಾಧ್ಯಕ್ಷರಾದ ಶಿವಲಿಂಗೇಂದ್ರಸ್ವಾಮೀಜಿ, ಚಿಕ್ಕತುಪ್ಪೂರು ಶಿವಪೂಜಾ ಮಠದ ಚನ್ನವೀರಸ್ವಾಮೀಜಿ, ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಮೈಸೂರು ಬ್ಯಾಂಕ್ ಮಾಜಿ ನಿರ್ದೇಶಕ ಎಚ್.ಎಸ್.ಪ್ರಭುಸ್ವಾಮಿ, ಮೈಸೂರು ಬಿಜಿಎಸ್ ಕಾಲೇಜಿನ ಉಪನ್ಯಾಸಕ ಡಾ.ಎಚ್.ಬಿ.ಬೆಟ್ಟಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.