ಜಿಲ್ಲೆ

ವಚನ ಸ್ಪರ್ಧೆ ನ.11ರಂದು

ಹುಲಸೂರು: ಬಸವಕಲ್ಯಾಣದಲ್ಲಿ ನಡೆಯಲಿರುವ ೪೪ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ನಿಮಿತ್ತ ಶ್ರೀ ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ತಾಲೂಕು ಮಟ್ಟದ ಶರಣರ ವಚನ, ಗಾಯನ, ವಚನ ಭಾಷಣ, ವಚನ ಭಾವಾರ್ಥ, ಬರವಣಿಗೆ ಸ್ಪರ್ಧೆ ಏರ್ಪಡಿಸಲಾಗಿದೆ.

ನ.೧೦ರಂದು ಬೆಳಗ್ಗೆ ೧೧ರಿಂದ ಪಟ್ಟಣದ ಹಾಲಹಳ್ಳಿ ರಸ್ತೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ಪರ್ಧೆ ನಡೆಯಲಿವೆ. ೬ ರಿಂದ ೧೦ನೇ ತರಗತಿ, ಪದವಿಪೂರ್ವ ಮತ್ತು ಪದವಿ ವಿಧ್ಯಾರ್ಥಿಗಳಿಗೆ ವಚನ ಗಾಯನಕ್ಕೆ ೩ ರಿಂದ ೫ ನಿಮಿಷ , ಭಾಷಣಕ್ಕೆ ೫ ನಿಮಿಷ ಮತ್ತು ವಚನ ಭಾವರ್ಥ ಬರವಣಿಗೆಗೆ ೨೦ ನಿಮಿಷ ಸಮಯಾವಕಾಶವಿದೆ. ತಾಲೂಕಿನ ವಿದ್ಯಾರ್ಥಿಗಳು ಭಾಗವಹಿಸಬಹುದು.

ವಿಜೇತರಿಗೆ ನ.೧೯ರಂದು ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ೧೦೦೦ ರೂ., ದ್ವಿತೀಯ ೫೦೦ ರೂ., ತೃತೀಯ ಬಹುಮಾನ ೩೦೦ ರೂ. ನೀಡಲಾಗುತ್ತದೆ. ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಮಾಹಿತಿಗೆ ಶಿವರಾಜ ಖಪಲೆ ೯೦೬೭೦೮೦೭೭೩, ರಾಜಕುಮಾರ ತೊಂಡಾರೆ ೮೮೬೭೫೫೯೬೫೭ ಅವರನ್ನು ಸಂಪರ್ಕಿಸಿ.