ಭಾಲ್ಕಿ: ಮನುಷ್ಯನ ಬದುಕಿಗೆ, ದೈಹಿಕ ಬೆಳವಣಿಗೆಗೆ ಪಲ್ಸ್ ಪೊಲೀಯೋ ಮುಖ್ಯವಾದಂತೆ ಮಾನಸಿಕ ಶಕ್ತಿ ತುಂಬಲು ವಚನ ಸಾಹಿತ್ಯ ಸಂಜೀವಿನಿಯಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ೪೪ನೇ ಶರಣ ಕಮ್ಮಟ, ಬಸವಕಲ್ಯಾಣ ಅನುಭವ ಮಂಟಪ ಉತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ವಚನ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಒತ್ತಡದ ಜೀವನದಲ್ಲಿ ಮನುಷ್ಯನಿಗೆ ನೆಮ್ಮದಿ ಇಲ್ಲದಂತಾಗಿದೆ. ಆದ್ದರಿಂದ ವಚನ ನಮ್ಮೆಲ್ಲರ ಉಸಿರಾಗಬೇಕು ಎಂದರು.
ವಚನಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ನಿಮಿತ್ತ ಜಿಲ್ಲಾದ್ಯಂತ ವಚನ ಸ್ಪರ್ಧೆ ಆಯೋಜಿಸಿದ್ದಾರೆ ಎಂದರು. ಶಿವಾಜಿ ಸಗರ, ಮುರುಳಿಧರ ಕಾಮಶೆಟ್ಟೆ, ಲಕ್ಷö್ಮಣ ಮೇತ್ರೆ, ಮಲ್ಲಿಕಾರ್ಜುನ ಪಾಟೀಲ್ ತೀರ್ಪುಗಾರರಾಗಿದ್ದರು. ವಚನ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಶ್ರೀ ಗುರುಬಸವ ಪಟ್ಟದ್ದೇವರು ಸನ್ಮಾನಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮಲ್ಲಮ್ಮ ಪಾಟೀಲ್, ಬಂಡೆಪ್ಪ ಶರಣರು, ಗುಂಡಪ್ಪ ಸಂಗಮಕರ್, ಹಣಮಂತ ಕಾರಾಮುಂಗೆ, ಶಿವಾಜಿ ಸಗರ, ಮುರಳೀಧರ ಕಾಮಶೆಟ್ಟಿ, ಯಲ್ಲನಗೌಡ ಬಾಗಲಕೋಟ, ಲಕ್ಷö್ಮಣ ಮೇತ್ರೆ, ಮಲ್ಲಿಕಾರ್ಜುನ ಪಾಟೀಲ್, ಪರಮೇಶ್ವರ ಕಡ್ಯಾಳೆ, ಬಾಬು ಬೆಲ್ದಾಳ, ಸವಿತಾ ಭೂರೆ, ಸಂಗೀತಾ ಸೋಲಪುರೆ, ಜಯರಾಜ ನಿಂಬೂರೆ, ಶಿವ, ಶಿವಶಂಕರ ಹಡಪದ ಇತರರಿದ್ದರು. ವೀರಣ್ಣ ಕುಂಬಾರ ನಿರೂಪಣೆ ಮಾಡಿದರು. ಬಾಬು ಬೆಲ್ದಾಳ ವಂದಿಸಿದರು.