ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಶ್ರಾವಣ ಮಾಸ ನಿಮಿತ್ತ ಆ.೪ರಿಂದ ಸೆ.೩ರವರೆಗೆ ನಿತ್ಯ ಸಂಜೆ ೬ಕ್ಕೆ ವಚನ ವೈಭವ ಉಪನ್ಯಾಸ ಮಾಲೆ ಏರ್ಪಡಿಸಲಾಗಿದೆ ಎಂದು ಮಹಾಸಭಾ ವಚನ ವೈಭವ ಸಂಚಾಲಕ ರವಿ ಸಜ್ಜನ್ ಹೇಳಿದರು. ಶ್ರಾವಣದಲ್ಲಿ ಪ್ರತಿ ಮನೆಗೆ ಶರಣರ ವಿಚಾರ ತಲುಪಿಸುವುದೇ ಉಪನ್ಯಾಸ ಮಾಲೆ ಉz್ದÉÃಶ. ತಿಂಗಳ ಪರ್ಯಂತ ಆಯ್ದ ಶರಣರ ಮನೆಯಂಗಳದಲ್ಲಿ ಒಬ್ಬ ಶರಣರ ತತ್ವಗಳ ಬಗ್ಗೆ ಅನುಭಾವಿಗಳು ಅನುಭವ ನೀಡಲಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಲ್ಲ ಬಸವಪರ, ಜಾಗತಿಕ ಲಿಂಗಾಯತ ಮಹಾಸಭಾ, ಮಹಿಳಾ ಘಟಕ, ಯುವ ಘಟಕ ಮತ್ತು ಕಾಯಕ ಶರಣರ ಸಂಘಟನೆಗಳ ಆಶ್ರಯದಲ್ಲಿ ಪ್ರತಿ ತಿಂಗಳ ೨೫ರಂದು ಆನಂದ ನಗರದ ಬಸವ ಮಂಟಪದಲ್ಲಿ ಶರಣ ಸಂಗಮ ಹಾಗೂ ಕಾಯಕ ಶರಣರ ಸಾಮೂಹಿಕ ಜಯಂತಿ ಆಯೋಜಿಸಲಾಗುವುದು ಎಂದರು. ಪಿ.ಎಸ್. ಮಹಾಗಾಂವಕರ್, ಆರ್.ಜೆ. ಶೆಟಗಾರ್, ಸಿದ್ಧರಾಮ ಯಳವಂತಗಿ, ಭಗವಂತರಾಯ ದಂಡಗುAಡ ಇತರರಿದ್ದರು.