ಶ್ರೀರಂಗಪಟ್ಟಣ: ಚಂದ್ರವನ ಆಶ್ರಮದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ನಡೆಸಿಕೊಟ್ಟ ನೂರಾರು ಮಹಿಳಾ ಕಲಾವಿದರ ತಂಡದ ವಚನ ಮಹೋತ್ಸವಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಶುಕ್ರವಾರ ಚಂದ್ರವನ ನವರಾತ್ರಿ ಉತ್ಸವ ಹಾಗೂ ಕಾಯಕ ಸೇವಾ ಧುರೀಣ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪೀಠಾಧಿಪತಿ ಡಾ.ತ್ರಿನೇತ್ರ ಮಂಹಾತ ಶಿವಯೋಗಿ ಸ್ವಾಮೀಜಿಯವರು ಮಹಿಳೆಯರಿಗೆ ಬಾಗೀನದ ಜತೆಗೆ ಮಡಿಲಕ್ಕಿ ತುಂಬಿ ತವರು ಮಠದ ಪ್ರೀತಿ ಹಾಗೂ ಶ್ರೀರಕ್ಷೆ ನೀಡಿದರು. ಈ ವೇಳೆ ಮೈಸೂರಿನ ಪ್ರಸಿದ್ದ ಕಲಾವಿದೆ ಶೈಲಜಾ ಸಿದ್ದರಾಮಪ್ಪ ನೇತೃತ್ವದಲ್ಲಿ ಸುಮಾರು 500 ಮಹಿಳಾ ಕಲಾವಿದರ ತಂಡ ಜಗಜ್ಯೋತಿ ಶ್ರೀ ಬಸವೇಶ್ವರರ ವಚನಗಳನ್ನು ಪ್ರಸ್ತುತಪಡಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಲಾವಿದರನ್ನು ಅಭಿನಂದಿಸಿದರು.