ಬಾಗಲಕೋಟೆ: ವಕ್ಫ್ ಕಾಯ್ದೆ ತಿದ್ದುಪಡಿ ವಿರೋಽಸಿ ಕೇಂದ್ರ ಸರ್ಕಾರ ವಿರುದ್ಧ ಆಲ್ ಇಂಡಿಯಾ ಮುಸ್ಲಿಮ ಪರಸೊನೆಲ್ ಲಾ ಬೋರ್ಟ್ ಜಿ¯್ಲÁ ಘಟಕ ನೇತೃತ್ವದಲ್ಲಿ ಮುಸ್ಲಿಂ ಸಮಾಜದವರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ನವನಗರದ ಅಂಜುಮನ್ ಸಂಸ್ಥೆ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಾಳಿದಾಸ ವೃತ್ತ, ಜಿಲ್ಲಾ ಆಸ್ಪತ್ರೆ, ನಗರಸಭೆ, ಎಸ್ಪಿ ಕಚೇರಿ ರಸ್ತೆ ಮೂಲಕ ಜಿಲ್ಲಾಡಳಿತ ತಲುಪಿ ಸಭೆಯಾಗಿ ಮಾರ್ಪಟ್ಟಿತು. ಈ ವೇಳೆ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಲಾಯಿತು.
ಮಂಗಳೂರಿನ ಮುಖಂಡ ರಿಯಾಜ್ ಕಡಂಬು ಮಾತನಾಡಿ, ಬಿಜೆಪಿ, ಆರ್‌ಎಸ್‌ಎಸ್ ಸಂವಿಧಾನದ ಮೇಲೆ ದಾಳಿ ನಡೆಸುತ್ತಿವೆ. ಮುಸ್ಲಿಮರ ಹಕ್ಕನ್ನು ಕಸಿದುಕೊಳ್ಳುವ ಷಡ್ಯಂತ್ರ ಅಡಗಿದೆ. ವಕ್ಫ್ ಇದ್ದ ಹಲವಾರು ಹಕ್ಕುಗಳನ್ನು ತೆಗೆದು ಹಾಕುವ ಮೂಲಕ ದ್ರೋಹ ಎಸಲಾಗುತ್ತಿದೆ. ನ್ಯಾಯಕ್ಕಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಬೋರ್ಡ್ಗೆ ತಿದ್ದುಪಡಿ ತಂದಿದ್ದು, ೨೨ ಮಂದಿಯಲ್ಲಿ ಎಂಟು ಮಂದಿ ಮುಸ್ಲಿಮರಿಗೆ ಮಾತ್ರ ಅವಕಾಶ ನೀಡಲಾಗಿದೆ. ಟ್ರಿಬ್ಯುನಲ್ ನೀಡುವ ತೀರ್ಪು ಈ ಹಿಂದೆ ಅಂತಿಮವಾಗಿತ್ತು. ಈಗ ಅದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಅಽಕಾರ ನೀಡಲಾಗಿದೆ. ವ್ಯಾಜ್ಯ ಉಂಟಾದರೆ ಕೋರ್ಟ ಬದಲಾಗಿ ಜಿ¯್ಲÁಽಕಾರಿ, ಅವರಿಗಿಂತ ಹೆಚ್ಚಿನ ಅಽಕಾರ ಇರುವವರಿಗೆ ತೀರ್ಪಿನ ಅಽಕಾರ ನೀಡಲಾಗಿದೆ. ಅಽಕಾರಿಗಳು ಯಾವಾಗಲೂ ಸರ್ಕಾರದ ಪರವಾಗಿಯೇ ತೀರ್ಪು ನೀಡುತ್ತಾರೆ ಎಂದು ಆರೋಪಿಸಿದರು.
ವಕ ಆಸ್ತಿ ಸರ್ವೆ ಮಾಡುವ ಅಽಕಾರವನ್ನು ಜಿ¯್ಲÁಽಕಾರಿಗೆ ನೀಡಲಾಗಿದೆ. ಹಿಂದೂಗಳು ವಕ್ಫ್ ಗೆ ಭೂಮಿ ದಾನ ಮಾಡಿದ ಉದಾಹರಣೆಗಳಿವೆ. ಆದರೆ, ಈಗ ದಾನ ಮಾಡಬೇಕಾದರೆ ಐದು ವರ್ಷದಿಂದ ಮುಸ್ಲಿಂರಾಗಿರಬೇಕು ಎಂಬ ಷರತ್ತು ವಿಽಸಲಾಗಿದೆ. ಮುಸ್ಲಿಂರನ್ನು ಆರ್‌ಎಸ್‌ಎಸ್ ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುತ್ತಿದೆ. ಹಿಂದೂಮುಸ್ಲಿAರು ಭಾವೈಕ್ಯದಿಂದ ಇರಬಾರದು ಎಂಬುದು ಪ್ರಧಾನ ಮೋದಿ ನಡೆಯ ಹಿಂದಿನ ಮರ್ಮ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಮಹಾದೇವ ಹಾದಿಮನಿ, ಬಿಜೆಪಿ ಸರ್ಕಾರ ಮಾಡಿರುವ ವಕ ಕಾಯಿದೆ ತಿದ್ದುಪಡಿ ಜನತಂತ್ರ ವಿರೋಽಯಾಗಿದೆ. ಬಿಜೆಪಿಯು ದಲಿತ, ಮುಸ್ಲಿಂ ವಿರೋಽಯಾಗಿದೆ. ಸ್ವಾಭಿಮಾನದ ಹೋರಾಟ ಮುಂದುವರೆಯಲಿದೆ ಎಂದರು.
ಮೌಲಾನ ಮೊಹಸಿನ, ಸ್ವಾತಂತ್ರ‍್ಯಕ್ಕಾಗಿ ಮುಸ್ಲಿಮರು ಹೋರಾಟ ಮಾಡಿz್ದÁರೆ. ಚುನಾವಣೆಗಾಗಿ ಒಗ್ಗಟ್ಟಿನ ನಡುವೆ ಬಿರುಕು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಮುಖಂಡ ಪರಶುರಾಮ ಮಹಾರಾಜನವರ ಮಾತನಾಡಿ, ಜನ ವಿರೋಽ ತಿದ್ದುಪಡಿ ಮಾಡಲಾಗಿದೆ. ದೇಶದಲ್ಲಿ ನೂರಾರು ಧರ್ಮದ ಜನರು, ಸಾವಿರಾರು ಜಾತಿ ಜನರು ಒಂದಾಗಿ ಬದುಕಿದ್ದೇವೆ. ಧಾರ್ಮಿಕ ಸ್ವಾತಂತ್ರ‍್ಯ ಕಿತ್ತುಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.
ಕಾಶಿ ವಿಶ್ವನಾಥ, ಅಯೋಧ್ಯೆ, ತಿರುಪತಿ ಟ್ರಸ್ಟ್ ನಲ್ಲಿ ಹಿಂದೂಗಳೇ ಇರಬೇಕು ಎಂದು ಕಾಯಿದೆ ಮಾಡುತ್ತೀರಿ. ಮುಸ್ಲಿಮರ ಬೋರ್ಡ್ನಲ್ಲಿ ಮಾತ್ರ ಅವರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುತ್ತೀರಿ ಇದು ಎಂತಹ ನ್ಯಾಯ ಎಂದು ಪ್ರಶ್ನಿಸಿದರು.
ಅಂಜುಮನ್ ಸಂಸ್ಥೆ ಅಯ್ಯೂಬ ಪುಣೇಕರ, ಅಕ್ಬರ ಮು¯್ಲÁ, ಆರ್.ಎಚ್. ಪೆಂಡಾರಿ, -Áರೂಕ್ ಮೌಲಾನಾ, ಜಿ.ಎಂ. ತರ-Àದಾರ, ಜಾಕೀರ ಮೊಕಾಶಿ, ಅಬ್ದುಲ್ ವಹಾಬï, ರಜÁಕ ಬೆಣೂರ, ಮಹಬೂಬ್ ಮುದ್ದೇಬಿಹಾಳ, ಜಾ-Àರ ಬೇಪಾರಿ, ಸಿಕಂದರ ಅಥಣಿ, ಅಬುಶಮ ಖಾಜಿ, ಉಸ್ಮಾನ ಗಣಿ, ಮತ್ತಿತರರು ಪಾಲ್ಗೊಂಡಿದ್ದರು.
=========
ಬಾಕ್ಸ್...
ಜನರ ನೆಮ್ಮದಿ, ಕೋಮುದ್ವೇಷ ಬೆಳೆಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸರ್ಕಾರ ನಿಮ್ಮ ಜತೆಗೆ ಇದೆ. ಹೋರಾಟಕ್ಕೆ ಬೆಂಬಲವಿದೆ. ಮತಕ್ಕಾಗಿ ಜನರ, ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಲಾಗುತ್ತಿದೆ. ವಕ್ ಹಕ್ಕಿಗಾಗಿ ಹೋರಾಟ ಮಾಡುತ್ತಿರುವುದು ಸರಿಯಾಗಿದೆ. ಅನ್ಯಾಯದ ವಿರುದ್ಧ ಹೋರಾಟ ಮುಂದುವರೆಸಬೇಕು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಹೋರಾಟದಲ್ಲಿ ಭಾಗವಹಿಸಿದ್ದ
ಶಾಸಕರಾದ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ ಮಾತನಾಡಿ, ವಕ್ ವಿರುದ್ಧದ ಹೋರಾಟದಲ್ಲಿ ನಿಮ್ಮ ಜತೆಗೆ ಇದ್ದೇನೆ. ಶಾಸಕರು, ಸಚಿವರು ಸೇರಿ ವಕ್ ತಿದ್ದುಪಡಿ ಜಾರಿಗೆ ತರದಂತೆ ಮನವಿ ಮಾಡಲಾಗುವುದು. ವಕ ವಿಷಯದಲ್ಲಿ ಏಕ ಪಕ್ಷಿಯವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
==========