ವಕ್ಫ್ ಕಾಯ್ದೆ ತಿದ್ದುಪಡಿ ಖಂಡಿಸಿ ಭದ್ರಾವತಿಯಲ್ಲಿ ಅಂಜುಮನ್ ಸಂಸ್ಥೆ ನೇತೃತ್ವದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದರು. ಮುರ್ತುಜಾ ಖಾನ್, ಸಿ.ಎಂ.ಖಾದರ್, ಮಹಮದ್ ಸನಾವುಲ್ಲಾ ಇತರರಿದ್ದರು. 
ಜಿಲ್ಲೆ

ವಕ್ಫ್ ತಿದ್ದುಪಡಿ ಕಾಯ್ದೆ ಮರುಪರಿಶೀಲಿಸಲಿ

ಭದ್ರಾವತಿ: ವಕ್ಫ್ ಕಾಯ್ದೆ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಶುಕ್ರವಾರ ಅಂಜುಮನ್ ಸಂಸ್ಥೆಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಮಾಧವಾಚಾರ್ ವೃತ್ತದಿಂದ ರಂಗಪ್ಪ ವೃತ್ತದವರೆಗೂ ಮೆರವಣಿಗೆ ನಡೆಸಿ ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದು ಅಸಂವಿಧಾನಿಕ ನಡೆ. ಹಿಂದು ಹಾಗೂ ಮುಸ್ಲಿಮರ ನಡುವಿನ ಬಾಂಧವ್ಯ ಒಡೆಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ತಿದ್ದುಪಡಿ ಮಾಡಿರುವ ವಕ್ಫ್ ಕಾಯ್ದೆಯನ್ನು ಮರು ಪರಿಶೀಲನೆ ಮಾಡುವ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸಬೇಕು ಎಂದರು.

ವಕ್ಫ್ ಎಂಬುದು ಮುಸ್ಲಿಮರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಸ್ತಿಯಾಗಿದೆ. 2025ರ ವಕ್ಫ್ ತಿದ್ದುಪಡಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ದ್ದು ಕಾಯಿದೆ ಹಿಂಪಡೆಯುವ ಮೂಲಕ ಮರುಪರಿಶೀಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಗರಸಭಾ ಸದಸ್ಯ ಬಿ.ಕೆ.ಮೋಹನ್, ಅಂಜುಮನ್ ಸಂಸ್ಥೆ ತಾಲೂಕು ಅಧ್ಯಕ್ಷ ಮುರ್ತುಜಾ ಖಾನ್, ಸಿ.ಎಂ.ಖಾದರ್, ಮಹಮದ್ ಸನಾವುಲ್ಲಾ, ಅಮೀರ್ ಜಾನ್, ಬಾಬು, ಮುಸವೀರ್ ಬಾಷಾ, ಅಲ್ತಫ್ ಅಹಮದ್ ಇತರರಿದ್ದರು.