ಜಿಲ್ಲೆ

ವಕೀಲರ ಹಿತ ರಕ್ಷಣಾ ಕಾಯ್ದೆ ಜಾರಿಗೊಳಿಸಿ

ಬಾಗಲಕೋಟೆ: ಬೆಳಗಾವಿ ಅಽವೇಶನದಲ್ಲಿ ವಕೀಲರ ಹಿತ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ನ್ಯಾಯವಾದಿಗಳ ಸಂಘ ಬಾಗಲಕೋಟೆ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ವಕೀಲರು ರಾಜ್ಯದಲ್ಲಿ ನಿತ್ಯವು ಒಂದಿಲ್ಲೊಂದು ಕಾರಣಕ್ಕೆ ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತೀವೆ. ತಪ್ಪಿತಸ್ಥರ ಮೇಲೆ ಕ್ರಮ ಆಗುತ್ತಿಲ್ಲ. ಹೀಗಾಗಿ ವಕೀಲರ ಹಿತ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಬಿ.ಪೂಜಾರ, ವಕೀಲರಾದ ಶ್ರೀಶೈಲ ಹಾವರಗಿ, ಅನಿಲ ಜಾಧವ, ಬಿ.ಕೆ.ದಾಸರ, ಡಿ.ಎಸ್.ಚಿಕ್ಕಸಂಶಿ, ಎಸ್.ಎಂ.ಕುಂಬಾರ, ಸಿ.ಆರ್.ಸರಿಕಾರ ಸೇರಿದಂತೆ ಇತರರು ಇದ್ದರು.