ಪಾವಗಡ: ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿರುವ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬುಧವಾರ ತಹಸೀಲ್ದಾರ್ ಕಚೇರಿ ಮುಂದೆ ದಲಿತಪರ ಸಂಟನೆಗಳು ಪ್ರತಿಭಟಿಸಿ, ಬಳ್ಳಾರಿ ರಸ್ತೆಯನ್ನು ತಡೆದು ವಕೀಲ ರಾಕೇಶ್ ಕಿಶೋರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಭಾವಚಿತ್ರಕ್ಕೆ ಬೆಂಕ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾಮಾದಿಗ ಸಂಟನೆಯ ಅಧ್ಯ ಕೃಷ್ಣಮೂರ್ತಿ ಮಾತನಾಡಿ, ಸುಪ್ರೀಂ ಕೋರ್ಟಿನ ಸಿಜೆ ಬಿ.ಆರ್.ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್ನ ಆವರಣದಲ್ಲಿಯೇ ಶೂ ಎಸೆಯಲು ಯತ್ನಿಸಿ ವಕೀಲ ರಾಕೇಶ್ ಕಿಶೋರ್ ನ್ಯಾಯಮೂರ್ತಿಗಳಿಗೆ ಅಗೌರವ ತೋರಿಸಿದ್ದಾರೆ. ಇದೊಂದು ಕಾನೂನು ಬಾಹಿರವಾಗಿರುವ ಟನೆ. ರಾಕೇಶ್ ಕಿಶೋರ್ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಸಿ.ಕೆ.ತಿಪ್ಪೇಸ್ವಾಮಿ ಮಾತನಾಡಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿರುವುದು ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯಲ್ಲ, ನ್ಯಾಯಾಂಗ ಮತ್ತು ಸಂವಿಧಾನ ಮೇಲಿನ ದಾಳಿಯಾಗಿದೆ. ಮನುವಾದಿಗಳು ಈ ಕಪ್ಪುಚುಕ್ಕಿಯನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಸೂಕ್ತ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ತಹಸೀಲ್ದಾರ್ ವೈ.ರವಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಮಾದಿಗ ದಂಡೋರ ಉಪಾಧ್ಯ ವಳ್ಳೂರ್ ನಾಗೇಶ್, ರೈತ ಸಂದ ಜಿಲ್ಲಾಧ್ಯ ಪೂಜಾರಪ್ಪ, ದಲಿತ ಸಂಟನೆ ಮುಖಂಡರಾದ ಡಿಎಸ್ಎಸ್ ಪೆದ್ದಣ್ಣ, ಕಡಮಲ ಕುಂಟೆ ಹನುಮಂತರಾಯಪ್ಪ, ವೆಂಕಟರಮಣ, ಕಡಪಲಕೆರೆ ನರಸಿಂಹಪ್ಪ, ನೆಲಗಾನಹಳ್ಳಿ ಮಂಜು, ರೈತ ಸಂದ ಶಿವ, ದಾಸರಮ್ಮನಹಳ್ಳಿ ನರಸಿಂಹ ಇತರರು ಇದ್ದರು.