ಜಿಲ್ಲೆ

ಲೋಪವಾಗದಂತೆ ಕ್ರಮ ವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲತಾ ಸೂಚನೆ

ಬಾಗೇಪಲ್ಲಿ : ತಾಲೂಕಿನ ಪೋಲವಾರಪಲ್ಲಿ ಕರೊನಾ ಕೇರ್ ಸೆಂಟರ್, ಪಟ್ಟಣದ ಸೀಲ್‌ಡೌನ್ ಪ್ರದೇಶ ಹಾಗೂ ಗೂಳೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಪರಿಶೀಲನೆ ನಡೆಸಿದರು.

ಸೋಂಕು ದೃಡಪಟ್ಟವರು ಭಯಪಡಬೇಕಿಲ್ಲ, ಆರೋಗ್ಯ ಇಲಾಖೆ ಅಧಿಕಾರಿಗಳ ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸಿ ಔಷಧ ಸೇವಿಸಿದರೆ ಸೋಂಕಿನಿಂದ ಶೀಘ್ರವೇ ಗುಣಮುಖರಾಗಬಹುದು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಕಡ್ಡಾಯವಾಗಿ ಮಾಸ್ಕ್ ಬಳಕೆ, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ಗುಂಪು ಗುಂಪಾಗಿ ಸೇರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸರ್ಕಾರ ವಿಧಿಸಿರುವ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕೇರ್ ಸೆಂಟರ್‌ಗಳಲ್ಲಿನ ವ್ಯವಸ್ಥೆ, ಸೋಂಕಿತರ ಯೋಗಕ್ಷೇಮ, ಆಹಾರ, ಶುಚಿತ್ವದ ಬಗ್ಗೆ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಯಾವುದೇ ಕಾರಣಕ್ಕೂ ಲೋಪ ಉಂಟಾಗದಂತೆ ಕ್ರಮ ವಹಿಸುವಂತೆ ಸೂಚಿಸಿದರು. ತಹಸೀಲ್ದಾರ್ ಎಂ.ನಾಗರಾಜ್, ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ವಿ.ಪಂಕಜಾರೆಡ್ಡಿ, ಪೊಲೀಸ್ ವೃತ್ತ ನಿರೀಕ್ಷಕ ನಯಾಜ್‌ಬೇಗ್, ನೋಡಲ್ ಅಧಿಕಾರಿಗಳಾದ ಡಿ.ವೈ.ಮಂಜುನಾಥ್, ಸಿಡಿಪಿಒ ರಾಜೇಂದ್ರಪ್ರಸಾದ್, ಪಿಡಿಒ ಭಾಗ್ಯಲಕ್ಷ್ಮೀ, ವೈದ್ಯ ಜ್ಞಾನಕುಮಾರ್, ವ್ಯವಸ್ಥಾಪಕ ರಾಮು ಇತರರಿದ್ದರು.