ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ರಸ್ತೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಸಿದಂತೆ ಸ್ಥಳೀಯ ಲೋಕೋಪಯೋಗಿ ಇಲಾಖೆ ಕಚೇರಿಗೆ ಸೋಮವಾರ ಇಲಾಖೆ ಹಿರಿಯ ಅಕಾರಿಗಳು ಆಗಮಿಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಜೆಡಿಎಸ್ ದೇವದುರ್ಗ ತಾಲೂಕು ಅಧ್ಯಕ್ಷ ಬುಡ್ಡನಗೌಡ ಒಂದೇ ರಸ್ತೆಗೆ ಎರಡ್ಮೂರು ಇಲಾಖೆಗಳಿಂದ ಅನುದಾನ ಎತ್ತುವಳಿ ಮಾಡಲಾಗಿದ್ದು, ರಸ್ತೆ ನಿರ್ಮಾಣ ಮಾಡದಿದ್ದರೂ ಬಿಲ್ ಪಾವತಿಸಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ತನಿಖೆಗೆ ಮುಂಚೆಯೇ ಇಲಾಖೆ ಹಿರಿಯ ಅಕಾರಿಗಳು ಆಗಮಿಸಿ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಮಾಜಿ ಶಾಸಕ ಕೆ.ಶಿವನಗೌಡ ನಾಯಕಗೆ ಸೇರಿದ ರಂಜಿತ್ ಕನ್ಸಟ್ರಕ್ಷನ್ ರಸ್ತೆ ಕಾಮಗಾರಿ ನಡೆಸಿದ್ದರು ಬಿಲ್ ನೀಡಲಾಗಿದ್ದು, 2022ರಲ್ಲಿ ಇಲಾಖೆಯಿಂದ ಬಿಲ್ ಪಾವತಿಸಲಾಗಿದ್ದು, ದೂರು ನೀಡಿದ ನಂತರ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಒಂದೇ ರಸ್ತೆಗೆ ಲೋಕೋಪಯೋಗಿ ಇಲಾಖೆ ಮತ್ತು ಕೆಬಿಜೆಎನ್‌ಎಲ್‌ಯಿಂದ ಬಿಲ್ ಪಾವತಿ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಅಕಾರಿ, ಕೆಬಿಜೆಎನ್‌ಎಲ್‌ನ ಮತ್ತು ಪಿಎಂಜಿಎಸ್‌ವೈನ ಹಿರಿಯ ಅಕಾರಿಗಳು ಕಚೇರಿಗೆ ಆಗಮಿಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ ಇಇ ಚನ್ನಬಸಪ್ಪ ಮೆಕಾಲೆ, ಪಿಎಂಜಿಎಸ್‌ವೈ ಇಇ ಮೇನಕಾ ಪಟೇಲ್ ಹಾಜರಿದ್ದರು.