ಜಿಲ್ಲೆ

ಲೋಕಾಯುಕ್ತ ಬಲೆಗೆ ಬಿದ್ದ ತಾಂತ್ರಿಕ ಸಹಾಯಕ

ಚಾಮರಾಜನಗರ: ಎಂ ಸ್ಯಾಂಡ್ ಗುಣಮಟ್ಟ ಪರೀಕ್ಷಾ ವರದಿ ನೀಡಲು ಲಂಚ ಪಡೆಯುತ್ತಿದ್ದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ತಾಂತ್ರಿಕ ಸಹಾಯಕನೊಬ್ಬ ಮಂಗಳವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಯ ಗುಣಭರವಸೆ ವಿಭಾಗದ ತಾಂತ್ರಿಕ ಸಹಾಯಕ, ತಾಲೂಕಿನ ಉಮ್ಮತ್ತೂರು ಗ್ರಾಮದ ನಂದರಾಜು(27) ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವವನು.

ಪ್ರಸನ್ನ ಎಂಬುವವರು ಗುಣಮಟ್ಟ ಪರೀಕ್ಷೆಗಾಗಿ ಎಂ ಸ್ಯಾಂಡ್ ನೀಡಿದ್ದರು. ಪರೀಕ್ಷಾ ವರದಿ ನೀಡಬೇಕಾದರೆ 5500 ರೂ. ಕೊಡಬೇಕೆಂದು ನಂದರಾಜು ಲಂಚದ ಬೇಡಿಕೆ ಇಟ್ಟಿದ್ದ. 1 ಸಾವಿರ ರೂ. ಅಡ್ವಾನ್ಸ್ ಪಡೆದುಕೊಂಡಿದ್ದರು. ಈ ಸಂಬಂಧ ಪ್ರಸಾದ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಉಳಿಕೆ 4500 ರೂ.ಗಳನ್ನು ಮಂಗಳವಾರ ಕೊಡುವಾಗ ಲೋಕಾಯುಕ್ತರು ದಾಳಿ ನಡೆಸಿ ಸೆರೆ ಹಣವನ್ನು ವಶ ಪಡಿಸಿಕೊಂಡು ನಂದರಾಜುನನ್ನು ಸೆರೆ ಹಿಡಿದಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.