ಜಿಲ್ಲೆ

ಲೋಕಾಯುಕ್ತ ದಾಳಿ, ಪಾಲಿಕೆ ಅಧಿಕಾರಿಗಳು ವಶ

ಬಳ್ಳಾರಿ : ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಮೂವರನ್ನು ಬಂಧಿಸಲಾಗಿದೆ.
ಪಾಲಿಕೆ ಎಂಜನಿಯರ್ ಮಹಾದೇವ, ಜೆಇ ವಿರುಪಾಕ್ಷಪ್ಪ, ಕೇಸ್ ವರ್ಕ್‌ರ್ ಸೇರಿ ಮೂವರನ್ನು ಬಂಧಿಸಲಾಗಿದೆ. ನಾಲ್ಕು ಎಕರೆ ಜಮೀನಲ್ಲಿ ಪಾಲಿಕೆಯಿಂದ ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡುವಂತೆ ನಗರದ ನಿವಾಸಿ ಪ್ರಕಾಶರಾವ್ ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಪಾಲಿಕೆ ಅಧಿಕಾರಿಗಳು ಲೇಔಟ್ ಅನುಮತಿ ನೀಡಲು 14 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಅಧಿಕಾರಿಗಳು ಮೊಬೈಲ್‌ನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆಡಿಯೋ ಸಮೇತ ಪ್ರಕಾಶರಾವ್ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನಲೆ ಪಾಲಿಕೆ ಕಚೇರಿಯಲ್ಲಿನ ಅಧಿಕಾರಿಗಳ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.