ಜಿಲ್ಲೆ

ಲೋಕಾಯುಕ್ತ ಡಿವೈಎಸ್ಪಿಗೆ ನಾಗರಿಕರಿಂದ ದೂರು ಸಲ್ಲಿಕೆ

Mysuru Rural

ಚ್.ಡಿ.ಕೋಟೆ: ಸಾಗುವಳಿ ಮಂಜೂರಾಗಿದ್ದರೂ ಖಾತೆ ಮಾಡಿ ಕೊಡುತ್ತಿಲ್ಲ, ಸರ್ಕಾರಿ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ, ಹಕ್ಕುಪತ್ರ ಇದ್ದರೂ ಗ್ರಾಮ ಪಂಚಾಯಿತಿ ಪಿಡಿಒ ಖಾತೆ ಮಾಡಿ ಕೊಡುತ್ತಿಲ್ಲ, ಸರ್ಕಾರಿ ಓಣಿಯನ್ನು ಪ್ರಭಾವಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದರೂ ತೆರವುಗೊಳಿಸುತ್ತಿಲ್ಲ.
ಇದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ಮೈಸೂರಿನ ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೇಳಿ ಬಂದ ಪ್ರಮುಖ ದೂರುಗಳು.
ಹಂಪಾಪುರ ಗ್ರಾಮದ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಜಾಗವನ್ನು ಅನಧಿಕೃತವಾಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ಸ್ಥಳದಲ್ಲಿ ಅಂಗಡಿ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಸೋಮಣ್ಣ ದೂರಿದರು.
ಇದಕ್ಕೆ ಉತ್ತರಿಸಿದ ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಿ ವರದಿ ನೀಡಿಲು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಜೆರಾಲ್ಡ್ ಅವರಿಗೆ ಸೂಚಿಸಿದರು.

ಸಾರ್ವಜನಿಕರು ನೀಡಿದ ದೂರಿಗೆ ಅಧಿಕಾರಿಗಳಿಂದ ನ್ಯಾಯ ಸಿಗದೆ ಇದ್ದರೆ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ ಎಂದು ಡಿವೈಎಸ್ಪಿ ತಿಳಿಸಿದರು.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಉಮೇಶ್, ತಹಸೀಲ್ದಾರ್ ರತ್ನಾಂಬಿಕಾ, ಇಒ ರಾಜೇಶ್ ಜೆರಾಲ್ಡ್, ಗ್ರೇಡ್ 2 ತಹಸೀಲ್ದಾರ್ ಸಣ್ಣರಾಮಪ್ಪ, ಅಧಿಕಾರಿಗಳಾದ ಡಾ.ಟಿ.ರವಿಕುಮಾರ್, ಉದಯಕುಮಾರ್, ರಂಗಸ್ವಾಮಿ, ರಾಮೇಗೌಡ, ಜನಾರ್ದನ್, ಆಶಾ, ಶಶಿಕಲಾ ಇದ್ದರು.