ಹೊಸಪೇಟೆ: ಹೊಸಪೇಟೆ ಲೋಕಾಯುಕ್ತ ಘಟಕದಿಂದ ಆ. ೮ ರಿಂದ ಆ.೨೨ರ ವರೆಗೆ ವಿವಿಧ ತಾಲೂಕುಗಳಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ.
ಆ. ೮ ರಂದು ಕೂಡ್ಲಿಗಿ ತಾಲೂಕಿನ ಸರ್ಕಾರಿ ಪ್ರವಾಸಿ ಮಂದಿರ ಸಭಾಂಗಣದಲ್ಲಿ, ಆ.೧೭ರಂದು ಹರಪನಹಳ್ಳಿ ತಾ.ಪಂ. ಸಭಾಂಗಣ, ಹೊಸಪೇಟೆಯ ಹುಡಾ ಕಚೇರಿ ಕಟ್ಟಡದಲ್ಲಿರುವ ಲೋಕಾಯುಕ್ತ ಕಚೇರಿ ಸಭಾಂಗಣದಲ್ಲಿ ಆ.೨೨ರಂದು ಸಭೆ ನಡೆಯಲಿದೆ.
ಆಯಾ ದಿನದಂದು ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೧ ಗಂಟೆ ವೆರೆಗೆ ನಡೆಯಲಿದ್ದು, ಸರ್ವಾಜನಿಕ ಕಚೇರಿಗಳಲ್ಲಿ ಅನಗತ್ಯ ವಿಳಂಬ, ಕಿರುಕುಳ, ತೊಂದರೆ ಅಥವಾ ಸಿಬ್ಬಂದಿ ದುರಾಡಳಿತಕ್ಕೆ ಸಂಬAಧಿಸಿದAತೆ ದೂರುಗಳಿದ್ದಲ್ಲಿ ಹಾಜರಾಗಿದೂರ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಸಲ್ಲಿಸಬಹುದು ಎಂದು ಪೊಲೀಸ್ ಉಪಾಧೀಕ್ಷಕ ಸುರೇಶ್‌ರೆಡ್ಡಿ ಎಂ.ಎಸ್. ತಿಳಿಸಿದ್ದಾರೆ.