ಚಿತ್ರದುರ್ಗ: ಮುಂಬರುವ ತಾಪಂ, ಜಿಪಂ, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಘೋಷಿಸುವ ಅಭ್ಯರ್ಥಿಗಳ ಗೆಲುವಿಗಾಗಿ ಈಗಿನಿಂದಲೇ ಸಿದ್ಧರಾಗಿ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಸಲಹೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ಮಾತನಾಡಿ, ಪ್ರಧಾನಿ ಅವರಿಗೆ ಹಸಿವಿನ ಅರಿವು ಇಲ್ಲ. ಹೀಗಾಗಿ ಅಕ್ಕಿ ನೀಡುವಲ್ಲೂ ರಾಜಕೀಯ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ, ಸಂಘಟನಾ ಶಕ್ತಿ ಇದ್ದರೆ ಗೆಲುವಿನ ಹಾದಿ ಸುಲಭ. ಚುನಾವಣೆ ಗೆಲ್ಲಲು ಪಕ್ಷದ ಹಿರಿಯರು ನೀಡುವ ಸಲಹೆ, ಮಾರ್ಗದರ್ಶನದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎ.ವಿ.ಉಮಾಪತಿ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ, ಬಿ.ಟಿ.ಜಗದೀಶ್, ಪಾತ್ಯರಾಜನ್, ಓ.ಶಂಕರ್, ಸುದರ್ಶನ್, ಎಚ್.ಅಂಜಿನಪ್ಪ, ಮುನಿರಾ ಎ.ಮುಕಾಂದಾರ್, ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಎಂ.ಹನೀಫ್, ಜಯಣ್ಣ, ಮುದಸಿರ್ ನವಾಜ್, ಸೈಯದ್ ಖುದ್ದೂಸ್, ರಘು, ಕರಿಯಪ್ಪ, ಮಧುಗೌಡ ಇತರರಿದ್ದರು.
ಲೋಕಸಭೆ ಸಂಬಂಧ ಕ್ಷೇತ್ರದಲ್ಲಿ 18 ಲಕ್ಷ ಮತದಾರರಿದ್ದು, ಅದರಲ್ಲಿ 8.5 ಲಕ್ಷ ಎಸ್ಸಿ ಸಮುದಾಯದ ಮತಗಳಿವೆ. ಹೀಗಾಗಿ ಸ್ಪರ್ಧಿಸಲು ಸ್ಥಳೀಯರಿಗೆ ಅವಕಾಶ ಕೊಡಬೇಕು. ಈ ವಿಚಾರವನ್ನು ರಾಜ್ಯ, ರಾಷ್ಟ್ರ ವರಿಷ್ಠರ ಗಮನಕ್ಕೆ ತರಬೇಕು.
ಡಾ.ಬಿ.ತಿಪ್ಪೇಸ್ವಾಮಿ, ಕೆಪಿಸಿಸಿ ಸದಸ್ಯ