ಜಿಲ್ಲೆ

ಲೋಕಸಭಾ ಚುನಾವಣೆ ಒಟ್ಟು ಶೇ.೭೨.೬೬ ರಷ್ಟು ಮತದಾನ

ಉದ್ಯಾನಗಿರಿಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮತ ಎಣಿಕಾ ಕೇಂದ್ರ ಹಾಗೂ ಭದ್ರತಾ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಚುನಾವಣೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಒಟ್ಟು ೧೮,೦೬೧೮೩ ಮತಗಳ ಪೈಕಿ ೧೩,೧೨,೩೧೯ ಮತಗಳು ಚಲಾವಣೆಗೊಳ್ಳುವ ಮೂಲಕ ಒಟ್ಟು ಶೇ.೭೨.೬೬ ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.

ಮುಧೋಳ ಮೀಸಲು ಕ್ಷೇತ್ರದಿಂದ ಒಟ್ಟು ೨೦೮೯೮೨ ಪೈಕಿ ೧೫೯೬೨೧ ಮತ ಚಲಾವಣೆಗೊಳ್ಳುವ ಮೂಲಕ (ಶೇ.೭೬.೩೮) ರಷ್ಟು ಮತದಾನವಾದರೆ, ತೇರದಾಳ ಮತಕ್ಷೇತ್ರದಲ್ಲಿ ಒಟ್ಟು ೨೩೭೪೫೦ ಮತಗಳ ಪೈಕಿ ೧೮೩೬೬೧ ಮತಗಳು ಚಲಾವಣೆಗೊಂಡು (ಶೇ.೭೭.೩೫) ರಷ್ಟು, ಜಮಖಂಡಿ ಮತಕ್ಷೇತ್ರದಲ್ಲಿ ಒಟ್ಟು ೨೨೩೯೮೧ ಮತಗಳ ಪೈಕಿ ೧೬೩೩೫೯ ಮತಗಳು ಚಲಾವಣೆಗೊಂಡು (ಶೇ.೭೨.೯೩) ರಷ್ಟು, ಬೀಳಗಿ ಮತಕ್ಷೇತ್ರದಲ್ಲಿ ಒಟ್ಟು ೨೩೫೫೯೩ ಮತಗಳ ಪೈಕಿ ೧೭೫೩೭೧ ಮತ ಚಲಾವಣೆಗೊಂಡು (ಶೇ.೭೪.೪೪) ರಷ್ಟು, ಬಾದಾಮಿ ಮತಕ್ಷೇತ್ರದಲ್ಲಿ ಒಟ್ಟು ೨೨೬೫೦೦ ಮತಗಳ ಪೈಕಿ ೧೬೨೯೨೫ ಮತ ಚಲಾವಣೆಗೊಂಡು (ಶೇ.೭೧.೯೩) ರಷ್ಟು, ಬಾಗಲಕೋಟೆ ಮತಕ್ಷೇತ್ರದಲ್ಲಿ ಒಟ್ಟು ೨೫೩೨೮೪ ಮತಗಳ ಪೈಕಿ ೧೬೭೫೭೩ ಮತ ಚಲಾವಣೆಗೊಂಡು (ಶೇ.೬೬.೧೬) ರಷ್ಟು, ಹುನಗುಂದ ಮತಕ್ಷೇತ್ರದಲ್ಲಿ ಒಟ್ಟು ೨೨೮೩೪೯ ಮತಗಳ ಪೈಕಿ ೧೫೫೨೩೦ ಮತ ಚಲಾವಣೆಗೊಂಡು (ಶೇ.೬೭.೯೮) ರಷ್ಟು ಹಾಗೂ ನಗರಗುಂದ ಕ್ಷೇತ್ರದಿಂದ ಒಟ್ಟು ೧೯೨೦೪೪ ಮತಗಳ ಪೈಕಿ ೧೪೪೫೭೯ ಮತ ಚಲಾವಣೆಗೊಂಡು (ಶೇ.೭೫.೨೮) ರಷ್ಟು ಮತದಾನವಾಗಿದೆ ಎಂದು ತಿಳಿಸಿದರು.

ತೇರದಾಳ ಮತಕ್ಷೇತ್ರದಲ್ಲಿ ಅತೀ ಹೆಚ್ಚ ಮತದಾನವಾದರೆ, ಬಾಗಲಕೋಟೆ ಮತಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದೆ. ಚಲಾವಣೆಗೊಂಡ ಒಟ್ಟು ೧೩೧೨೩೧೯ ಮತಗಳಲ್ಲಿ ೬೬೩೬೧೩ ಪುರುಷರು ಮತ ಚಲಾಯಿಸಿದರೆ, ೬೪೮೬೭೯ ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಅಲ್ಲದೇ ಒಟ್ಟು ೧೦೧ ಇತರೆ ಮತದಾರರ ಪೈಕಿ ೨೭ ಜನ ಮತ ಚಲಾಯಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆ-೨೦೧೯ ರಲ್ಲಿ ೬೮.೯೦ ರಷ್ಟು ಆದರೆ ಪ್ರಸಕ್ತ ಚುನಾವಣೆಯಲ್ಲಿ ಶೇ.೭೨.೬೬ ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಗಿಂತ ಪ್ರಸಕ್ತ ಚುನಾವಣೆಯಲ್ಲಿ ಶೇ.೩.೭೬ ರಷ್ಟು ಮತದಾನ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ಜೂನ್ ೪ ರಂದು ಮತ ಎಣಿಕ: ಜೂನ್ ೪ ರಂದು ಮತ ಎಣಿಕೆ ಕಾರ್ಯ ಜರುಗಲಿದ್ದು, ಉದ್ಯಾನಗಿರಿಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮತ ಎಣಿಕಾ ಕೇಂದ್ರ ಹಾಗೂ ಭದ್ರತಾ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ೮ ಮತಕ್ಷೇತ್ರಗಳ ಮತ ಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಭದ್ರವಾಗಿ ಇರಿಸಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ಒಂದು ಭದ್ರತಾ ಕೊಠಡಿ ಹಾಗೂ ಒಂದು ಎಣಿಕೆ ಕೊಠಡಿಯನ್ನು ಗುರುತಿಸಲಾಗಿದೆ. ನೆಲ ಮಹಡಿಯಲ್ಲಿ ಮುಧೋಳ, ಬಾದಾಮಿ, ಬೀಳಗಿ, ನರಗುಂದ ಮತಕ್ಷೇತ್ರಗಳಿಗೆ ಸಂಬAಧಿಸಿದ ಮತ ಎಣಿಕೆ ಕಾರ್ಯ ನಡೆದರೆ, ಮೊದಲನೇ ಮಹಡಿಯಲ್ಲಿ ತೇರದಾಳ, ಜಮಖಂಡಿ, ಬಾಗಲಕೋಟೆ ಹಾಗೂ ಹುನಗುಂದ ಮತಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.