ಜಿಲ್ಲೆ

ಲೋಕ ಅದಾಲತ್‌ನಲ್ಲಿ 7,581 ಪ್ರಕರಣಗಳು ಇತ್ಯರ್ಥ

ಮೈಸೂರು: ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 7,581 ಪ್ರಕರಣಗಳು ಇತ್ಯರ್ಥಗೊಂಡವು.
ಮೈಸೂರು ನಗರ ಮತ್ತು ತಾಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು 1,12,918 ಪ್ರಕರಣಗಳು ಬಾಕಿಯಿದ್ದು, ಅವುಗಳ ಪೈಕಿ 35,821 ಪ್ರಕರಣಗಳು ರಾಜಿಯಾಗಬಲ್ಲ ಪ್ರಕರಣಗಳು ಎಂದು ಗುರುತಿಸಲಾಗಿತ್ತು. ಅವುಗಳಲ್ಲಿ 20,753 ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. 4,003 ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹಾಗೂ 3,578 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಅಂದರೆ ಒಟ್ಟಾರೆಯಾಗಿ 7,581 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
85,50 ಕೋಟಿ ರೂ.ಸಂಗ್ರಹ:
ಅದಾಲತ್‌ನಲ್ಲಿ ಒಟ್ಟು 4,36,502 ಪ್ರಕರಣಗಳು ಇತ್ಯರ್ಥಗೊಂಡಿದ್ದು, 85,50,41,931 ರೂ.ಸಂಗ್ರಹವಾಗಿದೆ. ಇದರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ 4,29,219 ಕೇಸ್‌ಗಳು ಇತ್ಯರ್ಥಗೊಂಡಿದ್ದು, 8.79 ಕೋಟಿ ರೂ.ಹಣ ಸಂಗ್ರಹವಾಗಿದೆ. ಅಲ್ಲದೇ 836 ಚೆಕ್ ಬೌನ್ಸ್ ಪ್ರಕರಣಗಳಿಂದ 3.03 ಕೋಟಿ ರೂ., 232 ಮೋಟಾರು ವಾಹನ ಪ್ರಕರಣದಿಂದ 11,84 ಕೋಟಿ ರೂ., 130 ಕೌಟುಂಬಿಕ ಕಲಹ ಪ್ರಕರಣದಿಂದ 71.38 ಲಕ್ಷ ರೂ.ಪರಿಹಾರ ನೀಡಲು ಇತ್ಯರ್ಥವಾಗಿದೆ. 213 ಅಪರಾಧ ಪ್ರಕರಣಗಳಲ್ಲಿ 53.74 ಲಕ್ಷ ರೂ.ಪರಿಹಾರ ಸಿಕ್ಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಹೇಳಿದ್ದಾರೆ.