ಮೂಡಲಗಿ ಪಟ್ಟಣದ ದಿವಾಣಿ ಮತ್ತು ಜೆಎಂಎ್​ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಲೋಕ ಅದಾಲತ್​ನಲ್ಲಿ ನ್ಯಾಯಾಧೇಶೆ ಜ್ಯೋತಿ ಪಾಟೀಲ ಮಾತನಾಡಿದರು. ಯು. ಶೋಭಾ, ಆರ್​.ಆರ್​.ಬಾಗೋಜಿ, ಅನಿಲ ಕೌಜಲಗಿ, ಜ್ಯೋತಿ ಕೊಡತಿ ಇತರರಿದ್ದರು. 
ಜಿಲ್ಲೆ

ಲೋಕ ಅದಾಲತ್​ನಲ್ಲಿ 1954 ಪ್ರಕರಣ ಇತ್ಯರ್ಥ

ಮೂಡಲಗಿ: ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಲೋಕ ಅದಾಲತ್​ ಕಾರ್ಯಕ್ರಮ ದಾವೆದಾರರಿಗೆ ಬಹಳ ಅನುಕೂಲವಾಗಿದೆ ಎಂದು ಪಟ್ಟಣದ ದಿವಾಣಿ ಹಾಗೂ ಜೆಎಂಎ್​ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.

ಪಟ್ಟಣದ ದಿವಾಣಿ ಮತ್ತು ಜೆಎಂಎ್​ ನ್ಯಾಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕ ಅದಾಲತ್​ ಕಾರ್ಯಕ್ರಮದಲ್ಲಿ ಮಾತನಾಡಿದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಲೋಕ ಅದಾಲತ್​ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಸಮಯ ಹಾಗೂ ಹಣ ಉಳಿಸಬಹುದು. ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯ ಮೆಟ್ಟಿಲು ಏರಿರುವವರು ಸಂಧಾನದ ಮೂಲಕ ಪರಿಹಾರ ಪಡೆದರೆ ಇಬ್ಬರಿಗೂ ಗೆಲುವು ಸಿಗುತ್ತದೆ ಎಂದರು

43 ನಾಗರಿಕ ಪ್ರಕರಣ, 1620 ಅಪರಾಧ ಪ್ರಕರಣ, 23 ಬ್ಯಾಂಕ್​ ಪ್ರಕರಣ, ಮಹಿಳೆಗೆ ಉಪಜೀವನಾಂಶ, ಎರಡು ಜೋಡಿ ಹೊಂದಾಣಿಕೆ ಹಾಗೂ 265 ಜನನ&ಮರಣ ಪ್ರಕರಣಗಳನ್ನು ನ್ಯಾಯಾಧೀಶೆ ಜ್ಯೋತಿ ಪಾಟೀಲ ಅವರು ಇತ್ಯರ್ಥಗೊಳಿಸಿದರು. ಸರ್ಕಾರಿ ವಕೀಲೆ ಯು. ಶೋಭಾ, ವಕೀಲರ ಸಂದ ಅಧ್ಯಕ್ಷ ಆರ್​.ಆರ್​. ಬಾಗೋಜಿ, ಪ್ರಧಾನ ಕಾರ್ಯದರ್ಶಿ ಅನಿಲ ಕೌಜಲಗಿ, ವಕೀಲರಾದ ಲಕ್ಷ$್ಮಣ ಅಡಿಹುಡಿ, ಜ್ಯೋತಿ ಕೊಡತಿ, ದೀಪಾ ಕಿಲಾರಿ ಇತರರಿದ್ದರು.