ಜಿಲ್ಲೆ

ಲೋಕ ಅದಾಲತ್ ಕುರಿತು ಜಾಗೃತಿ ಅಗತ್ಯ

ಶಹಾಪುರ: ಇಲ್ಲಿನ ನ್ಯಾಯಾಲಯದಲ್ಲಿ ಸೆ.೧೪ರಂದು ಹಮ್ಮಿಕೊಂಡ ರಾಷ್ಟಿçÃಯ ಲೋಕ ಅದಾಲತ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶ ಸಿದ್ರಾಮ ಟಿಪಿ ಹೇಳಿದರು.

ನಗರದಲ್ಲಿ ಸೋಮವಾರ ಈ ಕುರಿತು ಕರೆದ ಪೂರ್ವಭಾವಿ ಮಾತನಾಡಿದ ಅವರು, ಸರ್ವರಿಗೂ ನ್ಯಾಯ ದೊರಕಿಸಿ ಕೊಡುವುದೇ ಈ ಅದಾಲತ್‌ನ ಮೂಲ ಉz್ದೆÃಶವಾಗಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ನೆಮ್ಮದಿ ಬದುಕು ನಡೆಸಬಹುದಾಗಿದೆ. ಹೀಗಾಗಿ ಸಾರ್ವಜನಿಕರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಕಳೆದ ಬಾರಿ ನಡೆದ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ೨೬೨೪ ಪ್ರಕರಣ ಇತ್ಯರ್ಥಗೊಂಡಿದ್ದವು. ವಿವಿಧ ಪ್ರಕರಣಗಳಿಂದ ೨೦.೨೫ ಕೋಟಿ ಹಣ ಸಂದಾಯವಾಗಿದೆ. ಸೆ.೧೪ರಂದು ನಡೆಯುವ ಈ ಲೋಕ ಅದಾಲತ್‌ಗೆ ೧೨೦೦ ಪ್ರಕರಣ ನೋಂದಣಿಯಾಗಿವೆ. ಕಳೆದ ಸಲಕ್ಕಿಂತ ಹೆಚ್ಚಿನ ಪ್ರಕರಣ ಈ ಸಲ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ವಕೀಲರು ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳಾದ ಅಪಘಾತ, ಪರಿಹಾರ ವ್ಯಾಜ್ಯ, ಆಸ್ತಿ ಸಂಬAಧಿತ, ಕೌಟುಂಬಿಕ ಪ್ರಕರಣ, ವಿಮೆ, ಹಣಕಾಸು ವ್ಯಾಜ್ಯ, ಸಣ್ಣ ಪುಟ್ಟ ಸಿವಿಲï ವ್ಯಾಜ್ಯ, ಲೇವಾದೇವಿ, ಬಾಡಿಗೆ, ಅಪಘಾತ ಪರಿಹಾರ, ವಾಹನ ವಿಮಾ ಕಂತು ಬಾಕಿ, ಭೂಮಿ ಖರೀದಿ ಸಂಬAಧಿತ ಪ್ರಕರಣಗಳನ್ನು ಈ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.

ರಾಜಿ ಸಂಧಾನದ ಮೂಲಕ ಆಗುವ ಪ್ರಯೋಜನವನ್ನು ಕಕ್ಷಿದಾರರು ತಿಳಿದುಕೊಳ್ಳಬೇಕು. ಅವರು ಸ್ವಪ್ರತಿಷ್ಠೆ ಬಿಟ್ಟು ವಿಶಾಲ ಮನಸ್ಥತಿಯಿಂದ ವ್ಯಾಜ್ಯಗಳನ್ನು ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಂಡರೆ ಬದುಕು ಒಳ್ಳೆಯ ರೀತಿಯಲ್ಲಿ ರೂಪಿತಗೊಳ್ಳುತ್ತದೆ. ಇದರಿಂದ ಕೋರ್ಟ್ನ ಸಮಯ, ಕಕ್ಷಿದಾರರಿಗೆ ಹಣ ಉಳಿಯುತ್ತದೆ ಎನ್ನುವುದನ್ನು ಎಲ್ಲರೂ ಮನಗಾಣಬೇಕು ಎಂದು ಸಲಹೆ ನೀಡಿದರು.

ಪ್ರಧಾನ ನ್ಯಾಯಾಧೀಶೆ ಶೋಭಾ, ಹೆಚ್ಚುವರಿ ನ್ಯಾಯಾಧೀಶ ಬಸವರಾಜ, ವಕೀಲರ ಸಂಘದ ಅಧ್ಯP್ಷÀ ಸಂತೋಷ ದೇಶಮುಖ, ಜಂಟಿ ಕಾರ್ಯದರ್ಶಿ ಭೀಮರಾಜ ಮೂಲಿಮನಿ ಇದ್ದರು.