ಡಾ. ಎಸ್ .ಆರ್.ರಂಗನಾಥನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ವಿದ್ಯಾರ್ಥಿಗಳು 
ಜಿಲ್ಲೆ

ಲೈಬ್ರರಿ ಸೈನ್ಸ್‌ಗೆ ರಂಗನಾಥನ್ ಕೊಡುಗೆ ಅಪಾರ

ವಸಂತಕುಮಾರ್ ಬಿ

ಗೋಣಿಕೊಪ್ಪಲು: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಂಗಳವಾರ ರಾಷ್ಟ್ರೀಯ ಗ್ರಂಥಾಲಯ ದಿನವನ್ನು ಆಚರಿಸಲಾಯಿತು.

ಈ ಸಂದರ್ಭ ಗ್ರಂಥಪಾಲಕರಾದ ಟಿ.ಕೆ.ಲತಾ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ಗ್ರಂಥಾಲಯ ವಿಜ್ಞಾನಕ್ಕೆ ಬಹುದೊಡ್ಡ ಕೊಡುಗೆ ನೀಡುವುದರ ಜತೆಗೆ ಗ್ರಂಥಾಲಯಕ್ಕೆ ವೈಜ್ಞಾನಿಕ ಸ್ವರೂಪ ನೀಡಿದವರು ಡಾ.ಎಸ್.ಆರ್.ರಂಗನಾಥನ್. ಆದ್ದರಿಂದ ಅವರ ಜನ್ಮ ದಿನ ಆ.12ನ್ನು ಗ್ರಂಥಾಲಯ ದಿನ ಆಚರಿಸುವ ಮೂಲಕ ರಂಗನಾಥ್ ಅವರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಉತ್ತಮ ಪುಸ್ತಕಗಳು ಒಳ್ಳೆಯ ಗೆಳೆಯರಿದ್ದಂತೆ ಎಂದರು.

ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ಮಾದಯ್ಯ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲೂ ಕೂಡ ಪುಸ್ತಕಗಳು ತನ್ನದೇ ಆದ ಪ್ರಾಮುಖ್ಯತೆ ಉಳಿಸಿಕೊಂಡಿವೆ. ಮನುಷ್ಯನ ಸರ್ವತೋಮುಖ ಬೆಳವಣಿಗೆಯಲ್ಲಿ ಪುಸ್ತಕಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದರು.

ಈ ಸಂದರ್ಭ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಬ್ರೈಟ ಕುಮಾರ್, ಎನ್‌ಸಿಸಿ ಅಧಿಕಾರಿ ಡಾ.ಲೆಫ್ಟಿನೆಂಟ್ ಎಂ.ಅರ್.ಆಕ್ರಂ, ಗ್ರಂಥಾಲಯ ಸಿಬ್ಬಂದಿ ಅನುರಾಧಾ, ಚೈತ್ರಾ ಇತರರು ಇದ್ದರು.