ನಾಗಮಂಗಲ: ಹಿಂದು ಧರ್ಮದ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುವ ದುರುದ್ದೇಶದಿಂದ ಲೈಂಗಿಕ ದೌರ್ಜನ್ಯ ಮಾಡುತ್ತಿರುವುದನ್ನು ಮತಾಂಧ ಮುಸ್ಲಿಮರು ನಿಲ್ಲಿಸದಿದ್ದರೆ ತಕ್ಕ ಉತ್ತರವನ್ನು ಮುಸ್ಲಿಂರ ರೀತಿಯಲ್ಲಿಯೇ ನೀಡಬೇಕಾಗುತ್ತದೆ ಎಂದು ಬಜರಂಗದಳ ಜಿಲ್ಲಾ ಕಾರ್ಯದರ್ಶಿ ಬಸವರಾಜು ಎಚ್ಚರಿಸಿದರು.
ಹಿಂದುಗಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಕಳೆದ ಒಂದು ತಿಂಗಳೊಳಗೆ ನಾಗಮಂಗಲ ಪಟ್ಟಣದಲ್ಲಿ ಇಬ್ಬರು ಹಿಂದು ಅಪ್ರಾಪ್ತ ಯುವತಿಯರ ಪ್ರತ್ಯೇಕವಾಗಿ ಮುಸ್ಲಿಂ ಯುವಕರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಹಿಂದುಗಳು ಮೌನವಾಗಿದ್ದಾರೆ ಎಂದು ಕ್ರೌರ್ಯ ಮೆರೆಯುತ್ತಿದ್ದಾರೆ. ಹಿಂದುಗಳ ಮೌನವನ್ನು ಕೆಣಕಿದರೆ ನಾಗಮಂಗಲವನ್ನು ಎರಡನೇ ಭಟ್ಕಳವನ್ನಾಗಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಹಿಂದುಗಳನ್ನು ಕೆಣಕಿದರೆ ಭಟ್ಕಳದಲ್ಲಿ ಯಾವ ರೀತಿ ಹತ್ಯೆಗಳು ನಡೆದವು ಅದೇ ರೀತಿ ನಾಗಮಂಗಲದಲ್ಲಿಯೂ ನಡೆಯುತ್ತವೆ. ಮುಸ್ಲಿಂ ವ್ಯಾಪಾರಸ್ಥರ ಬಳಿ ಹಿಂದುಗಳು ವ್ಯಾಪಾರ ವಹಿವಾಟು ಮಾಡಬೇಡಿ ಎಂದು ಕರೆಕೊಟ್ಟರು.
ಹಿಂದು ಜಾಗರಣ ವೇದಿಕೆಯ ಮೈಸೂರು ವಿಭಾಗದ ಸಂಯೋಜಕ ಚಿಕ್ಕಬಳ್ಳಿ ಬಾಲು ಮಾತನಾಡಿ, ಹಿಂದು ಧರ್ಮದ ಯಾರೊಬ್ಬರು ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ. ನಾವು ವ್ಯಾಪಾರ ಮಾಡಿ ನೀಡುವ ಹಣ ನಮ್ಮ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡಿ ನಂತರ ಅವರಿಗೆ ನ್ಯಾಯಾಲಯಕ್ಕೆ ತಗುಲುವ ಹಣವನ್ನು ನಾವೇ ನೀಡಿದಂತೆ. ಆದ್ದರಿಂದ ಯಾರೊಬ್ಬರು ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ. ಬಹುಸಂಖ್ಯಾತರಿರುವ ಹಿಂದುಗಳಾದ ನಾವು ಈ ರೀತಿ ದೌರ್ಜನ್ಯವಾಗಿದೆ ಎಂದು ಪ್ರತಿಭಟನೆ ಮಾಡುವುದು ಇಂದಿಗೆ ಕೊನೆಯಾಗಲಿದೆ. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆದರೆ ತಹಸೀಲ್ದಾರ್ ಅಥವಾ ಪೊಲೀಸ್ ಠಾಣೆಗೆ ಹೋಗಿ ಮನವಿ ಸಲ್ಲಿಸುವುದಿಲ್ಲ, ಬದಲಾಗಿ ಬೀದಿಯಲ್ಲಿ ನಿಂತು ತಕ್ಕ ಉತ್ತರವನ್ನು ಅವರದೇ ರೀತಿಯಲ್ಲಿ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ಜಾಥಾವು ಟಿಬಿ ವೃತ್ತದ ಗಣೇಶ ದೇವಾಲಯದ ಆವರಣದಿಂದ ಆರಂಭವಾಗಿ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ತಾಲೂಕು ಆಡಳಿತಸೌಧದವರೆಗೆ ನಡೆಯಿತು. ಜಾಥದಲ್ಲಿ ಜೈ ಬಜರಂಗಿ ಎಂದು ಕೂಗುವ ಜತೆಗೆ ಮತಾಂಧ ಮುಸ್ಲಿಂರ ವಿರುದ್ಧ ಧಿಕ್ಕಾರ ಮೊಳಗಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ನರಸಿಂಹಮೂರ್ತಿ, ಫೈಟರ್ ರವಿ, ಶಶಿ, ಮಹೇಶ್, ಹರೀಶ್, ಸಂತೋಷ್ ಇತರರಿದ್ದರು.