ಜಿಲ್ಲೆ

ಲೈಂಗಿಕ ಕಿರುಕುಳ ಆರೋಪ ಸಾಭಿತು ! ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು ಶಿಕ್ಷೆ

ವಿಜಯವಾಣಿ ಸುದ್ದಿಜಾಲ ಗದಗ
ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಭಿತಾದ ಹಿನ್ನೆಲೆ ಈ ಮೊದಲು ಮುಂಡರಗಿ ಬಿಇಓ ಆಗಿ ಸೇವೆ ಸಲ್ಲಿಸುತ್ತಿದ್ದ ಶಂಕ್ರಪ್ಪ ಹಳ್ಳಿಗುಡಿಗೆ ಜಿಲ್ಲಾ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ಶನಿವಾರ ಆದೇಶ ನೀಡಿದೆ. ದಂಡ ಪಾವತಿಸಲು ವಿಲವಾದ ಹಿನ್ನೆಲೆ ಹೆಚ್ಚುವರಿ 6 ತಿಂಗಳು ಜೈಲುವಾಸ ಶಿಕ್ಷೆ ವಿಧಿಸಿದೆ. ಶಂಕ್ರಪ್ಪ ಹಳ್ಳಿಗುಡಿ ಪ್ರಸ್ತುತ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆರೋಪ ಏನು?(ಆದೇಶದಲ್ಲಿ ಇದ್ದಂತೆ):
ಮುಂಡರಗಿ ಬಿಇಒ ಆರೋಪಿ ಶಂಕ್ರಪ್ಪ ಹಳ್ಳಿಗುಡಿ ಬಾಲಕಿ ಮನೆಗೆ ಹೋಗಿ "ನೀನು ನನಗೆ ತುಂಬ ಇಷ್ಟ ಆಗಿದ್ಧಿಯ. ತುಂಬ ದಿನದಿಂದ ನಿನ್ನ ಮಾತನಾಡಿಸಬೇಕೆಮದು ಅಂದು ಕೊಡ್ಡಿದ್ದೆ. ನೀನು ಯಾರನ್ನಾದರು ಮದುವೆಯಾಗು, ಆದರೆ ನನ್ನುನ್ನು ಪ್ರತಿಸು' ಎಂದಿದ್ದಾನೆ. ಬಾಲಕಿಯ ಎದೆಯ ಮೇಲೆ ಹೃದಯದ ಚಿತ್ರ ಬಿಡಿಸಿ ನಾನೂ ಯಾವಗಲೂ ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ ಎಂಬುದಾಗಿ ಮುಂಡರಗಿ ಪೊಲೀಸ್​ ಠಾಣೆಯಲ್ಲಿ 2020ರಲ್ಲಿ ಪ್ರಕರಣ ದಾಖಲಾಗಿತ್ತು. ಮಾ.21, 2020ರಂದು ಆರೋಪಿ ಮೇಲೆ ದೋಷಾರೋಹಣ ಪಟ್ಟಿ ಸಲ್ಲಿಸಲಾಗಿತ್ತು. ಸಾ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ.

ಕೋಟ್​:
ಪ್ರಕರಣ ಸಂಬಂಧ ಜಿಲ್ಲಾ ನ್ಯಾಯಾಲಯ ಶನಿವಾರ ಆದೇಶ ನೀಡಿದೆ. ತಪ್ಪಿತಸ್ಥರಿಗೆ ಇದೊಂದು ತಕ್ಕ ಪಾಠ. ಯಾರೇ ಇದ್ದರೂ ಮುಲಾಜಿಲ್ಲದೇ ನ್ಯಾಯದಾನ ನಮ್ಮ ಕರ್ತವ್ಯ.

- ಅಮರೇಶ ಹಿರೇಮಠ
ಜಿಲ್ಲಾ ಸರ್ಕಾರಿ ಅಭಿಯೋಜಕರು