ಕಲಬುರಗಿ: ಕಥೆ ರಚನೆ, ನಿರೂಪಣೆ ಶೈಲಿಯಲ್ಲಿ ಕಥೆಗಾರ ಎಚ್ಚರ ವಹಿಸಬೇಕು. ಕಥಾ ಹಂದರದ ತಿರುಳು ಬಹಳ ಮುಖ್ಯವೇ ಹೊರತು ಕಥೆಯ ಸಂಗತಿಗಳನ್ನು ಜೋಡಿಸುವುದಲ್ಲ. ಆದರೆ ಗಂಭೀರ ವಿಷಯಗಳ ಕುರಿತು ಕಥೆ ಬರೆಯುವಾಗ ಲೇಖಕರಿಗೆ ಸೂಕ್ಷö್ಮ ಪ್ರಜ್ಞೆ ಹಾಗೂ ಸಂವೇದನೆ ಮನಸ್ಸು ಬಹಳ ಮುಖ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಶಿವಗಂಗಾ ರುಮ್ಮಾ ಹೇಳಿದರು.
ಕುಸನೂರ ರಸ್ತೆ ಜಿಡಿಎ ಲೇಔಟ್‌ನ ಜನರಂಗ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಗನಗೌಡ ಹಿರೇಗೌಡ ಅವರ ಮೊಡಚಿಗಳು ಕಥಾ ಸಂಕಲನ ಬಿಡುಗಡೆಗೊಳಿಸಿದ ಅವರು, ಈ ಸಂಕಲನದ ಕಥೆಗಳಲ್ಲಿ ಸಾಮಾಜಿಕ ಪ್ರಜ್ಞೆಯುಳ್ಳ ವಿಚಾರಗಳಿವೆ. ಬಳಸಿರುವ ಭಾಷೆ ಮತ್ತು ನಾಟಕೀಯ ಶೈಲಿಯ ನಿರೂಪಣೆ ಅತ್ಯುತ್ತಮವಾಗಿದೆ. ಅದಕ್ಕೆ ಲೇಖಕರು ಬೆಳೆದಿರುವ ಪರಿಸರ, ಅನುಭವ ಮುಖ್ಯ ಕಾರಣ ಎಂದರು.
ಕಥೆಗಳಲ್ಲಿನ ಭಿನ್ನ ಪಾತ್ರಗಳು ನೈಜ ಬದುಕಿನ ತಾಕಲಾಟಗಳನ್ನು ಮುಚ್ಚುಮರೆ, ಎಚುಪೇಚಿಲ್ಲದೆ ಬಳಸಿರುವುದು ಕಥೆಗೆ ಮೆರುಗು ತಂದಿದೆ. ಸ್ತಿçÃಪ್ರಧಾನ ಪಾತ್ರಗಳು ಸೂಕ್ಷö್ಮ ಸಂವೇದನೆ ಮತ್ತು ಕಥಾ ಸಾಹಿತ್ಯದ ಗ್ರಹಿಕಾ ಅನುಭವ, ಪಾಲನೆ ಮತ್ತು ಪೋಷಣೆ ಅವಶ್ಯಕತೆಗೆ ತಕ್ಕಂತೆ ಬಳಸಬೇಕು ವಿನಃ ಅನಗತ್ಯವಾಗಿ ಬಳಸಿದರೆ ಲೇಖಕನ ಕಥಾ ಕುಸರಿ ಕೆಲಸಕ್ಕೆ ಹಿನ್ನೆಡೆಯಾಗಬಹುದು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕಥೆಗಾರ ಪ್ರೊ.ಕೆ.ಎಸ್. ನಾಯಕ ಮಾತನಾಡಿ, ಸಾಹಿತ್ಯದ ಪ್ರಕಾರಗಳಲ್ಲಿ ಜನಪದ ಭಾಷೆ ಬಳಕೆಯಾಗುತ್ತಿದೆ. ಸಾಹಿತ್ಯ ಮತ್ತು ಕಥೆಗೆ ಅಗತ್ಯ ಪದಗಳನ್ನು ಬಳಸಬೇಕು. ಸಾಹಿತ್ಯದಲ್ಲಿ ಭಾಷೆ ಗಟ್ಟಿಯಾಗಿದ್ದರೆ ಮಾತ್ರ ಜನಪ್ರಿಯವಾಗುತ್ತದೆ ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಅರುಣ ಜೋಳದ ಕೂಡ್ಲಗಿ ಪುಸ್ತಕ ಕುರಿತು ಮಾತನಾಡಿ, ಸಂಗನಗೌಡರ ಮೊಡಚಿಗಳು ಕಥಾ ಸಂಕಲನದಲ್ಲಿ ಬಿಂಬಿಸಿರುವ ಸನ್ನಿವೇಶ, ಪಾತ್ರ ಸೃಷ್ಟಿ ಕಲ್ಯಾಣ ಕರ್ನಾಟಕ ನೆಲದ ಸೊಗಡು, ಹೊಸ ತಲೆಮಾರಿನ ಲೇಖಕರ ಮೇಲೆ ಪ್ರಭಾವ ಬೀರುವಂತಿದೆ. ಹೊಸ ಆಲೋಚನೆ, ತಂತ್ರ ಮತ್ತು ಆಧುನಿಕ ಸಂಗತಿಗಳನ್ನು ಕಥೆಗಳಲ್ಲಿ ಬಳಕೆ ಮೂಲಕ ಹೊಸ ತಲೆಮಾರಿನ ಲೇಖಕರು ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜನರಂಗ ವೇದಿಕೆ ಅಧ್ಯಕ್ಷ ಶಂಕ್ರಯ್ಯ ಘಂಟಿ ಮಾತನಾಡಿದರು. ಲೇಖಕ ಸಂಗನಗೌಡ ಮಾತನಾಡಿದರು. ಗುಲ್ಬರ್ಗ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಡಾ.ಕೆ.ಎಂ. ಕುಮಾರಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ಮೊಡಚಿಗಳು ಸಂಕಲನದಲ್ಲಿ ಒಂಬತ್ತು ಕಥೆಗಳಿವೆ. ಇದರಲ್ಲಿರುವ ಕಥೆಗಳು ಸ್ಪರ್ಧೆಗಳಿಗೆ ಆಯ್ಕೆಯಾಗಿ ಬಹುಮಾನ ಪಡೆದಿರುವುದು ವಿಶೇಷ ಎಂದು ಹೇಳಿದರು.
ಕೇಂದ್ರೀಯ ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ, ಕಥೆಗಾರ್ತಿ ಸಂಧ್ಯಾ ಹೊನಗುಂಟಿಕರ್, ಎಚ್.ಎಸ್. ಬಸವಪ್ರಭು, ಪ್ರೊ.ಶೋಭಾ ಚಕ್ಕಿ, ಎಂ.ಬಿ. ಸಜ್ಜನ, ಮಲ್ಲಿಕಾರ್ಜುನ ಜಮಾದಾರ್, ಬಸವರಾಜ ನೆಲೋಗಿ, ಎಸ್.ಬಿ. ಉಪಳಾಂವಕರ್, ಜನರಂಗ ವೇದಿಕೆ ಕಾರ್ಯದರ್ಶಿ ಆಶಾ ಕಂಠಿ, ಸಾಗರ ಗಾಳೆ, ಆನಂದ ಗೊಪ್ಪಿ, ಮಹ್ಮದ್ ಆಸಿಫ್, ಪ್ರದೀಪ ಇತರರಿದ್ದರು. ಸುಖಿ ಸಂಸ್ಥೆಯ ಕವಿರಾಜ ಪ್ರಾರ್ಥಿಸಿದರು.