ಬೆಳಗಾವಿ: ಇಲ್ಲಿನ ಮಹಾಲಕ್ಷ್ಮೀ ನಗರ ನಿವಾಸಿ, ರೋಹಿತ್ ಶಿವನಗೌಡ ಮಗದುಮ್, ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಮೂಲತ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದ ರೋಹಿತ್ ತಂದೆ ಶಿವನಗೌಡ, ಸೇನೆಯಲ್ಲಿ ಸುಬೇದಾರರಾಗಿ ನಿವೃತ್ತರಾಗಿದ್ದಾರೆ. ಈಚೆಗೆ ಭೋಪಾಲನ ಸರ್ವಿಸ್ ಸೆಲೆಕ್ಷನ್ ಬೋರ್ಡಿನಲ್ಲಿ ನಡೆದ ಪ್ರಕ್ರಿಯೆಯಲ್ಲಿ ರೋಹಿತ್ ಲೆಫ್ಟನೆಂಟ್ ಹುದ್ದೆಗೆ ಆಯ್ಕೆಯಾಗಿದ್ದು, ಗಯಾದಲ್ಲಿನ ಆಫೀಸರ್ ಟ್ರೈನಿಂಗ್ ಅಕಾಡೆಮಿಗೆ ಸೆ. 29ರಿಂದ ಸೈನ್ಯದ ತರಬೇತಿಗೆ ಸೇರ್ಪಡೆಯಾಗುತ್ತಿದ್ದಾರೆ.
1ರಿಂದ 5ನೇ ತರಗತಿಯವರೆಗೆ ದೆಹಲಿಯಲ್ಲಿ, 6ರಿಂದ 12ನೇ ತರಗತಿವರೆಗಿನ ಶಿಕ್ಷಣವನ್ನು ಬೆಳಗಾವಿಯ ಕೇಂದ್ರೀಯ ವಿದ್ಯಾಲಯದಲ್ಲಿ ಪೂರ್ಣಗೊಳಿಸಿ, ಕೆಎಲ್‌ಎಸ್ ಗೋಗಲ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಬಿಇ ಶಿಕ್ಷಣ ಪಡೆದಿದ್ದಾರೆ.