ಜಿಲ್ಲೆ

ಲೂಯಿಸ್ ಬ್ರೖೆಲ್ ಜನ್ಮ ದಿನಾಚರಣೆ

Dharwad

ಹುಬ್ಬಳ್ಳಿ: ಲೂಯಿಸ್ ಬ್ರೖೆಲ್ ಅವರು ಕಂಡು ಹಿಡಿದ ಲಿಪಿಯು ಅಂಧರಿಗೆ ಸಂವಹನ ನಡೆಸಲು ಸಹಕಾರಿಯಾಗಿದೆ. ಅಂಧರ ಬಾಳಿಗೆ ಬ್ರೖೆಲ್ ಬೆಳಕಾಗಿದ್ದಾರೆ ಎಂದು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಮಾಂತೇಶ ಕುರ್ತಕೋಟಿ ಹೇಳಿದರು.

ಇಲ್ಲಿಯ ಸಿದ್ಧಾರೂಢ ಮಠದ ಅಂಧ ಬಾಲಕರ ಸರ್ಕಾರಿ ಶಾಲೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯಿಂದ ಆಯೋಜಿಸಿದ್ದ ಲೂಯಿಸ್ ಬ್ರೖೆಲ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರೖೆಲ್ ಅವರು ದೃಷ್ಟಿಹೀನರ ಬದುಕಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ವಿದ್ಯಾರ್ಥಿಗಳು ಅಂಗವೈಕಲ್ಯ ಮೆಟ್ಟಿ ನಿಂತು ಸಮಾಜದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಜಕುಮಾರ ಸಾಬೋಜಿ ಮಾತನಾಡಿ, ನಿವೃತ್ತ ಶಿಕ್ಷಕ ಸುರೇಂದ್ರ ಜೋರಾಪುರಿ, ಅಣ್ಣಪ್ಪ ಕೋಳಿ ಅವರು ಮಾತನಾಡಿದರು. ವಿದ್ಯಾರ್ಥಿ ರಫೀಕ ಮುಲ್ಲಾ ಲೂಯಿಸ್ ಅವರ ಜೀವನ ಚರಿತ್ರೆ ವಿವರಿಸಿದರು.

ಬ್ರೖೆಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಅಡವೇಶಯ್ಯ ಎಚ್.ಎಸ್. ನಿರೂಪಿಸಿದರು. ರುದ್ರಪ್ಪ ತಿರ್ಲಾಪುರ ವಂದಿಸಿದರು.