ನಟ ಅವಿನಾಶ ಹಾಗೂ ನಿರ್ಮಾಪಕ ಸೂರ್ಯಕಾಂತ ಕೊರಳ್ಳಿ... 
ಜಿಲ್ಲೆ

ಲೀಸ ಫಿಲ್ಮ್ ಬಿಡುಗಡೆ ಮಾ.4ರಂದು

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಸೇರಿ ಸಿದ್ಧಪಡಿಸಿದ `ಲೀಸ​' ಕನ್ನಡ ಚಲನಚಿತ್ರ ಮಾ. 4ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಸೂರ್ಯಕಾಂತ ಕೊರಳ್ಳಿ ತಿಳಿಸಿದರು.

ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದ್ದು, ಭ್ರಮಾಲೋಕದಲ್ಲಿನ ವ್ಯಕ್ತಿತ್ವವನ್ನು ಪ್ರಸ್ತುತಪಡಿಸುವ ಕಥಾಹಂದರ ಹೊಂದಿದೆ. ಚಿತ್ರ ತಂಡದಲ್ಲಿ ಬಹುತೇಕರು ಹೊಸಬರಾಗಿದ್ದಾರೆ. 1.40 ಗಂಟೆ ಅವಧಿಯು ಈ ಚಿತ್ರವನ್ನು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಪಾರ್ವತಿ ತಾಯಿ ಕೊರಳ್ಳಿ ಪ್ರೊಡಕ್ಷನ್(ಪಿಟಿಕೆ)ಅಡಿಯಲ್ಲಿನ ಪ್ರಥಮ ಚಿತ್ರ ಇದಾಗಿದೆ. ಕಥೆ, ಚಿತ್ರಕತೆ, ಸಾಹಿತ್ಯ ಮತ್ತು ನಿರ್ದೇಶನ ಮುತ್ತು ಅವರು ಮಾಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿತ್ರದ ನಾಯಕ ನಟ, ಸಹ ನಿರ್ಮಾಪಕ ಅವಿನಾಶ ಜಮಕಟ್ಟಿ ಮಾತನಾಡಿ, ಚಿತ್ರದಲ್ಲಿ ಮೂರು ಹಾಡುಗಳಿವೆ. ಬೀದರ್, ಕಲಬುರಗಿ, ಬೆಂಗಳೂರು ಇತರೆಡೆ ಚಿತ್ರೀಕರಣ ನಡೆದಿದೆ. ಎಸ್.ಆರ್.ಪ್ರಭು, ಸುರೇಂದ್ರನಾಥ ಸಂಗೀತ ಸಂಯೋಜಿಸಿದ್ದಾರೆ. ರಾಜ್ಯದ ಒಟ್ಟು 45 ಥೇಟರ್‌ಗಳಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆ ಆಗಲಿದೆ. ಗುರುವಾರ ಟ್ರೆಲರ್ ಬಿಡುಗಡೆಯಾಗಿದ್ದು, 2 ಲಕ್ಷ ವೀಕ್ಷಣೆ ಆಗಿವೆ ಎಂದು ತಿಳಿಸಿದರು. ಸುಮಂಗಲಾ ಜಮಕಟ್ಟಿ, ಎಂ.ಎಸ್.ಪಾಟೀಲ್ ನರಿಬೋಳ ಇದ್ದರು.

ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು, ಸಿನಿಮಾಸಕ್ತರು ಸೇರಿ ಲೀಸ ಚಿತ್ರ ನಿರ್ಮಿಸಿವೆ. ಕರ್ನಾಟಕ ಸೇರಿ ಈ ಭಾಗದ ಜನರು ಚಿತ್ರವನ್ನು ಥೇಟರ್‌ನಲ್ಲಿ ನೋಡಿ, ಪ್ರೋತ್ಸಾಹಿಸಬೇಕು.
| ಅವಿನಾಶ ಜಮಕಟ್ಟಿ,
ನಾಯಕ ನಟ ಹಾಗೂ ಸಹ ನಿರ್ಮಾಪಕ