ಕೋಲಾರ
ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೋಚಿಮುಲ್ ಒಕ್ಕೂಟ ಮಾ.16ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲಿಗೆ 2.10 ರೂಪಾಯಿ ಹೆಚ್ಚುವರಿ ಹಣ ನೀಡಲು ತೀರ್ಮಾನಿಸಿರುವುದಾಗಿ ಒಕ್ಕೂಟದ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ನಗರದ ಕೋಚಿಮುಲ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿ, ಹೆಚ್ಚುವರಿಯಾಗಿ 2.10 ರೂ. ನೀಡಲು ತಿಮಾರ್ನಿಸಿರುವುದರಿಂದ ರಾಜ್ಯದ 14 ಹಾಲು ಒಕ್ಕೂಟಗಳಿಗಿಂತ ಕೋಲಾರ ಜಿಲ್ಲೆಯ ಒಕ್ಕೂಟ ಅತಿಹೆಚ್ಚು ಬೆಲೆಯನ್ನು ರೈತರಿಗೆ ನೀಡಲು ತೀಮಾರ್ನಿಸಿದೆ ಎಂದರು.
ಹಾಲಿಗೆ ಕಡಿಮೆ ಬೆಲೆ ನೀಡುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಲಹೀನತೆಯನ್ನು ಖಾಸಗಿ ಡೇರಿಗಳು ಬಳಸಿ ಸರ್ಕಾರದ ನಿಯಮ ಪಾಲಿಸದೆ, ಎಫ್ಎಸ್ಎಸ್ಎಐ ಮಾನದಂಡಗಳನ್ನು ಅನುಸರಿಸದೆ, ಕಡಿಮೆ ಗುಣಮಟ್ಟದ ಹಾಲಿಗೂ ಹೆಚ್ಚುಬೆಲೆ ನೀಡುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮವಹಿಸಬೆಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸರ್ಕಾರ ಒಕ್ಕೂಟದ ಮನವಿಗೆ ಸ್ಪಂದಿಸಿಲ್ಲ. ಆದ್ದರಿಂದ ಇಲ್ಲಿಯ ರೈತರು ಒಕ್ಕೂಟಕ್ಕೆ ಪೂರೈಸುತ್ತಿರುವ ಹಾಲಿಗೆ ಹೆಚ್ಚಿನ ಬೆಲೆ ನೀಡಲು ತೀರ್ಮಾನಿಸಲಾಗಿದೆ ಎಂದರು. ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಜಯಸಿಂಹ ಕೃಷ್ಣಪ್ಪ, ಕೆ.ಎನ್.ನಾಗರಾಜ್, ಮಂಜುನಾಥರೆಡ್ಡಿ, ಜೆ. ಕಾಂತರಾಜ್, ವೈ.ಬಿ.ಅಶ್ವತ್ಥನಾರಾಯಣ, ಡಿ.ವಿ.ಹರೀಶ್, ಎನ್.ಸಿ.ವೆಂಕಟೇಶ್, ಎನ್.ಹನುಮೇಶ್, ಸುನಂದಮ್ಮ, ಕಾಂತಮ್ಮ, ಎಸ್. ವಿ.ಸುಬ್ಬಾರೆಡ್ಡಿ, ಉಪ ನಿರ್ದೇಶಕ ಡಾ.ಜಿ.ಟಿ.ರಾಮಯ್ಯ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎನ್.ನಾಗರಾಜ್, ಕಹಾಮ ಪ್ರತಿನಿಧಿ ಎಂ.ಕೃಷ್ಣಪ್ಪ, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಇದ್ದರು.
ಲೀಟರ್ಗೆ 33.90 ರೂಪಾಯಿ ಪರಿಷತ ದರ: ರೈತರಿಗೆ ಮುಂದೆ ಪೂರೈಸುವ ಶೇ.4.0 ಫ್ಯಾಟ್, ಶೇ.8.5 ಎಸ್ಎನ್ಎಫ್ ಅಂಶವುಳ್ಳ ಪ್ರತಿ ಲೀ. ಹಾಲಿಗೆ ಪ್ರಸ್ತುತ ನೀಡುತ್ತಿರುವ ದರ 31.90 ರೂ.ಗೆ 2.10 ರೂ. ಹೆಚ್ಚಿಸಿ, ಪರಿಷ್ಕರಿಸಿ 33.90ರೂಪಾಯಿ ಉತ್ಪಾದಕರಿಗೆ ಮತ್ತು 35.25 ರೂ.ನಂತೆ ಸಂಘಕ್ಕೆ ಪಾವತಿಸಲು ಒಕ್ಕೂಟ ತೀಮಾರ್ನಿಸಿದೆ. ಇದರೊಂದಿಗೆ ರಾಜ್ಯ ಸರ್ಕಾರ ರೈತರು ಪೂರೈಸುವ ಪ್ರತಿ ಲೀ. ಹಾಲಿಗೆ 5 ರೂ.ಗಳ ಪ್ರೋತ್ಸಾಹಧನ ನೀಡುತ್ತಿದೆ. ರೈತರಿಗೆ ಸರಾಸರಿ ಪ್ರತಿ ಲೀ.ಹಾಲಿಗೆ 38.90 ರೂಪಾಯಿ ಸಿಗುವಂತೆ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ನಂಜೇಗೌಡ ಹೇಳಿದರು.
ಹಾಲು ಸಂಗ್ರಹ ಸಂಘಕ್ಕೆ ಒಕ್ಕೂಟ ನೀಡುವ ಸೌಲಭ್ಯಗಳು: ನೂತನ ಸಂಘಗಳ ಕಟ್ಟಡ ನಿಮಾರ್ಣಕ್ಕೆಂದು 3 ಲಕ್ಷ ರೂಪಾಯಿ ಕಟ್ಟಡ ಅನುದಾನ, ಬಿಎಂಸಿ ಘಟಕಗಳನ್ನು ಅಳವಡಿಸಲು 1 ಲಕ್ಷ ರೂ. ಸಿವಿಲ್ ಕಾಮಗಾರಿ ಅನುದಾನ, ಶೀಥಲೀಕರಣ ವೆಚ್ಚಕ್ಕೆ ಪ್ರತಿ ಲೀ.ಗೆ 42 ಪೈಸೆ, ಹೆಚ್ಚುವರಿ ಅನುದಾನ, ಸಮೂಹ ಹಾಲು ಕರೆಯುವ ಯಂತ್ರಗಳಿಗೆ 2 ರೂ. ಸಂಘದ ಸಿವಿಲ್ ಕಾಮಗಾರಿಗಳಿಗಾಗಿ 50 ಸಾವಿರ ರೂ. ಸಂಘಗಳ ಪುಸ್ತಕ, ಪರಿಕರ, ಪ್ಯಾಟೋಮೀಟರ್, ಪ್ರಥಮ ಚಿಕಿತ್ಸೆ ಔಷಧ, ರಾಸುಗಳ ಆರೋಗ್ಯ ತಪಾಸಣಾ ಶಿಬಿರ ವೆಚ್ಚ, ಕ್ಯಾನ್ಗಳ ಶುಚಿತ್ವಕ್ಕೆ ಸೌಲಭ್ಯ ಒದಗಿಸಲು ಒಕ್ಕೂಟದಿಂದ ಅನುದಾನ ನೀಡಲಾಗುತ್ತಿದೆ ಎಂದು ನಂಜೇಗೌಡ ಹೇಳಿದರು.
ವಸತಿ ನಿಲಯ ನಿಮಾರ್ಣಕ್ಕೆ ಯೋಜನೆ: ಹಾಲು ಉತ್ಪಾದಕರ ಪ್ರತಿಭಾವಂತ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನ ಡಿಯೋ ಮಾವೇಲ್ ಲೇಔಟ್ನಲ್ಲಿ 11 ಸಾವಿರ ಅಡಿಗಳ ನಿವೇಶನವನ್ನು ಖರೀದಿಸಿದ್ದು, ಒಕ್ಕೂಟದಿಂದ ವಸತಿ ನಿಲಯ ನಿಮಾರ್ಣ ಮಾಡಲು ಯೋಜನೆ ನಡೆಸಲಾಗಿದೆ. ಹಾಲು ಉತ್ಪಾದಕರ ಪ್ರತಿಭಾವಂತ ವಿದ್ಯಾಥಿಗಳಿಗೆ ಪ್ರತಿ ತಾಲೂಕಿನಲ್ಲಿ 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೋಮೋ, ಬಿಇ, ಎಂಬಿಬಿಎಸ್, ಡೇರಿ ಟೆಕ್ನಾಲಜಿ, ಬಿವಿಎಸ್ಸಿ, ಬಿಎಸ್ಸಿ(ಅಗ್ರಿ), ಎಂಎಸ್ಸಿ ಶ್ರೇಣಿಗಳಲ್ಲಿ ಜ್ಯೇಷ್ಠತೆಯ ಆಧಾರದ ಮೇಲೆ 5,000 ರೂ. ನಿಂದ 20,000 ರೂ.ವರೆಗೆ ಸ್ನಾತಕೋತ್ತರ ಪದವಿವರೆಗೂ, ವೃತ್ತಿಪರ ವಿದ್ಯಾರ್ಹತೆ ಹೊಂದಿರುವವರಿಗೆ 25 ಸಾವಿರ ರೂ., ಕೆಎಎಸ್ ವ್ಯಾಸಂಗ ಮಾಡುತ್ತಿರುವವರಿಗೆ 25 ಸಾವಿರ ರೂ., ಐಎಎಸ್ ವ್ಯಾಸಂಗ ಮಾಡುತ್ತಿರುವವರಿಗೆ 50 ಸಾವಿರ ರೂ. ನೀಡುತ್ತಿದ್ದು, ಇದಕ್ಕೆ ವಾರ್ಷಿಕವಾಗಿ 60 ಲಕ್ಷ ರೂ. ಮೀಸಲಿಡಲಾಗಿದೆ ಎಂದು ನಂಜೇಗೌಡ ಹೇಳಿದರು.