ಜಿಲ್ಲೆ

ಲಿಫ್ಟ್‌ ಕುಸಿದು ಪೇಂಟರ್‌ ಸಾವು

ಬಳ್ಳಾರಿ : ನಗರದ ಚಂದ್ರ ಕಾಲನಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಳವಡಿಸಿದ್ದ ತಾತ್ಕಾಲಿಕ ಲಿಫ್ಟ್‌ ಕುಸಿದು ಪೇಂಟಿಂಗ್‌ ಕೆಲಸಗಾರ ಮೃತಪಟ್ಟಿದ್ದಾರೆ. ನಗರದ ಆಶ್ರೇಯ ಕಾಲೋನಿಯ ಜಿ. ವೀರಾಂಜಿನೇಯಲು (46) ಮೃತ. ಕಟ್ಟಡದ‌ ನಿರ್ಮಾಣ ಉದ್ದೇಶಕ್ಕಾಗಿ ತಾತ್ಕಾಲಿಕ ಲಿಫ್ಟ್‌ ಅಳವಡಿಸಲಾಗಿತ್ತು. ಇದರಲ್ಲಿ ಮೇಲಿನ ಮಹಡಿಗೆ ಹೋಗುವ ವೇಳೆ ವೀರಾಂಜಿನೇಯಲು ಅವರು ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಶನಿವಾರ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಟ್ರಾಮಾ ಕೇರ್‌ ಸೆಂಟರ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ‌ಕೌಲಬಜಾರ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.