ಬೈಲಹೊಂಗಲ: ಲಿಂಗಾಯತ ಧರ್ಮದಲ್ಲಿ ಹಲವಾರು ಪಂಗಡ, ಸಂಟನೆಗಳಿದ್ದು, ಅವರೆಲ್ಲರೂ ಒಗ್ಗೂಡಿದಾಗ ಮಾತ್ರ ಸ್ವತಂತ್ರ ಧರ್ಮದ ಮಾನ್ಯತೆ ಸಿಗಲಿದೆ ಎಂದು ಹುಬ್ಬಳ್ಳಿ&ಬೆಲಹೊಂಗಲ ರುದ್ರಾಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಇಂಚಲ ಕ್ರಾಸ್ ಬಳಿ ಶಿವಬಸವ ಕಲ್ಯಾಣ ಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಟಕದ ಅಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2023&24ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಅತ್ಯವಶ್ಯವಾಗಿದೆ. ಸಿದ್ದರಾಮಯ್ಯ ಅವರು ವಿಶ್ವಗುರು ಬಸವಣ್ಣನನ್ನು ಸಾಂಸತಿಕ ನಾಯಕ ಎಂದು ೂಷಿಸಿರುವುದು ಸಮುದಾಯಕ್ಕೆ ಹೆಮ್ಮೆಯಾಗಿದೆ ಎಂದರು.
ಬೆಳಗಾವಿ& ನಾಗನೂರಿನ ರುದ್ರಾಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಪ್ರತಿಭೆಗಳನ್ನು ಗೌರವಿಸುವುದರಿಂದ ಇತರರು ಸಾಧನೆ ಮಾಡಲು ಇಂತಹ ಚಟುವಟಿಕೆಗಳು ಪ್ರೇರಣೆಯಾಗಲಿವೆ ಎಂದರು. ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ವಿದ್ಯಾರ್ಥಿಗಳನ್ನು ಸಂಟನೆಯಿಂದ ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು. ಗುರುಗುಂಟಾದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಶಾಸಕ ಮಹಾಂತೇಶ ಕೌಜಲಗಿ ಅಧ್ಯತೆ ವಹಿಸಿದ್ದರು. ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ನಿರ್ದೇಶಕ ಡಾ.ಮಹಾಂತೇಶ ಆರಾದ್ರಿಮಠ, ಮಹಾಸಭಾದ ಜಿಲ್ಲಾಧ್ಯ ಬಸವರಾಜ ರೊಟ್ಟಿ, ಉದ್ಯಮಿ ವಿಜಯ ಮೆಟಗುಡ್ಡ, ಮುಖಂಡರಾದ ಶ್ರೀಶೆಲ ಬೋಳಣ್ಣವರ, ಪ್ರೇಮಾ ಅಂಗಡಿ, ಶಿವರಂಜನ ಬೋಳಣ್ಣವರ, ಪುರಸಭೆ ಮಾಜಿ ಅಧ್ಯ ಬಸವರಾಜ ಜನ್ಮಟ್ಟಿ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯ ಬಸವರಾಜ ಬಾಳೇಕುಂದರಗಿ, ಗುರುಪುತ್ರಪ್ಪ ಹೊಸಮನಿ, ಮಹಾಂತೇಶ ಮತ್ತಿಕೊಪ್ಪ, ರಾಜು ಕುಡಸೋಮಣ್ಣವರ, ಶ್ರೀಶೆಲ ಶರಣಪ್ಪನವರ, ಮಲ್ಲಪ್ಪ ಮುರಗೋಡ, ನಾನಾಸಾಹೇಬ ಪಾಟೀಲ, ಸುಭಾಷ ತುರಮರಿ, ಡಾ.ಶರಣಕುಮಾರ ಅಂಗಡಿ, ತಾಲೂಕು ಸಂಟನೆಯ ಅಧ್ಯ ಉಮೇಶ ಬೋಳೆತ್ತಿನ ಗೌರಮ್ಮ ಕರ್ಕಿ, ನಗರ ಟಕ ಅಧ್ಯ ಮಹೇಶ ಕೋಟಗಿ ಇತರರಿದ್ದರು.