ಕಮಲನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂಗಾಯತ ಸಮುದಾಯದ ಪದಾಧಿಕಾರಿಗಳ ಸಭೆಯಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದರು. ಡಾ.ಸಂಜೀವಕುಮಾರ ಜುಮ್ಮಾ, ಪ್ರಕಾಶ ಟೊಣ್ಣೆ, ರವೀಂದ್ರ ಮೀಸೆ, ಬಂಡೆಪ್ಪ ಕಂಟೆ, ಪ್ರಕಾಶ ಘೂಳೆ, ರಾಜಕುಮಾರ ಬಿರಾದಾರ, ಶಿವಕುಮಾರ ಘಾಟೆ, ಶಿವಾನಂದ ವಡ್ಡೆ, ಶಿವಶರಣಪ್ಪ ವಲ್ಲಾಪುರೆ, ರಾಜಕುಮಾರ ಪಾಟೀಲ್, ಸಂತೋಷ ಸೊಲ್ಲಾಪುರೆ ಇತರರಿದ್ದರು. 
ಜಿಲ್ಲೆ

ಲಿಂಗಾಯತರು ಒಗ್ಗಟ್ಟು ಪ್ರದರ್ಶಿಸುವ ಅಗತ್ಯ

ಕಮಲನಗರ: ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರಾಗಿರುವ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡಬೇಕೆಂದು ಒತ್ತಾಯಿಸಿ ನಡೆದಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ಸರ್ಕಾರ, ಲಿಂಗಾಯತರಿಗೆ ನ್ಯಾಯ ದೊರಕಿಸಿ ಕೊಡಬೇಕು. ಲಿಂಗಾಯತರು ಒಗ್ಗಟ್ಟು ಪ್ರದರ್ಶಿಸುವುದು ಪ್ರಸಕ್ತ ದಿನಗಳಲ್ಲಿ ಅಗತ್ಯವಾಗಿದೆ ಎಂದು ಲಿಂಗಾಯತ ಸಮುದಾಯದ ಪ್ರಮುಖರು ಹೇಳಿದರು.

ಪಟ್ಟಣದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂಗಾಯತ ಸಮುದಾಯದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಪ್ರಮುಖರು, ಲಿಂಗಾಯತ ಸ್ವತಂತ್ರ ಧರ್ಮವಾಗಲು ನಮ್ಮಲ್ಲಿ ತತ್ವವಿದೆ. ಧರ್ಮದ ಮಾನ್ಯತೆಗಾಗಿ ವಚನ ಸಾಹಿತ್ಯವಿದೆ. ಧರ್ಮಗ್ರಂಥ, ಧರ್ಮಗುರು ಎಲ್ಲವೂ ಇದೆ. ಈ ಕುರಿತು ಲಿಂಗಾಯತ ಸಮುದಾಯದ ಪ್ರತಿಯೊಬ್ಬರಿಗೂ ತಿಳಿ ಹೇಳಿ ಸಮಾಜದ ಬಲವರ್ಧನೆಗೆ ಶ್ರಮಿಸಬೇಕು ಎಂದರು.

ಧರ್ಮದ ಮಾನ್ಯತೆ ಹಾಗೂ ಸರ್ಕಾರದ ಸವಲತ್ತು ಪಡೆಯುವುದಕ್ಕಾಗಿ ಔರಾದ್ ಹಾಗೂ ಕಮಲನಗರ ತಾಲೂಕಿನ ಎಲ್ಲ ಲಿಂಗಾಯತರನ್ನು ಒಂದೆಡೆ ಸೇರಿಸಲು ಬೃಹತ್ ಲಿಂಗಾಯತ ಸಮಾವೇಶ ಮಾಡುವುದು ಅಗತ್ಯವಾಗಿದೆ. ಜನವರಿ ಕೊನೆಯ ವಾರದಲ್ಲಿ ಸಮಾವೇಶ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಲಿಂಗಾಯತ ಸಮಾಜದ ಈ ಸಮಾವೇಶವು ಲಿಂಗಾಯತರ ಶಕ್ತಿ ಪ್ರದರ್ಶನದ ಜತೆಗೆ ನಾಡಿಗೆ ಒಳ್ಳೆಯ ಸಂದೇಶ ರವಾನೆಯಾಗಿಬೇಕಿದೆ. ರಾಜ್ಯದಲ್ಲಿಯೇ ಐತಿಹಾಸಿಕ ಸಮಾವೇಶವಾಗಬೇಕು. ಸಮಾಜದ ಪ್ರತಿಯೊಬ್ಬರೂ ರಾಜಕೀಯ, ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾವೇಶದ ಯಶಸ್ಸಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಪ್ರಕಾಶ ಟೊಣ್ಣೆ, ರವೀಂದ್ರ ಮೀಸೆ, ಬಂಡೆಪ್ಪ ಕಂಟೆ, ಪ್ರಶಾಂತ ಮಠಪತಿ, ಪ್ರಕಾಶ ಘೂಳೆ ಮಾತನಾಡಿದರು.

ರಾಜಕುಮಾರ ಬಿರಾದಾರ, ಶಿವಕುಮಾರ ಘಾಟೆ, ಶಿವಾನಂದ ವಡ್ಡೆ, ಶಿವಶರಣಪ್ಪ ವಲ್ಲಾಪುರೆ, ರಾಜಕುಮಾರ ಪಾಟೀಲ್, ಸಂತೋಷ ಸೊಲ್ಲಾಪುರೆ, ಅವಿನಾಶ ಶಿವಣಕರ, ಜಗನ್ನಾಥ ಜೀರ್ಗೆ, ಸುರೇಶ ಸೊಲ್ಲಾಪುರೆ, ರವಿ ಕಾರಬಾರಿ, ಅಮರ ಶಿವಣಕರ, ಹಾವಗಿ ಟೊಣ್ಣೆ, ಶಿವಶರಣಪ್ಪ ಚಿಕಮುರ್ಗೆ, ಪ್ರಕಾಶ ಸೊಲ್ಲಾಪುರೆ, ಮಹೇಶ ಪಾಟೀಲ್, ಸಂತೋಷ ಸುಲಾಕೆ ಇತರರಿದ್ದರು. ಪ್ರಭುರಾವ ಬಿರಾದಾರ ಸ್ವಾಗತಿಸಿದರು. ಮಡಿವಾಳಪ್ಪ ಮಹಾಜನ ನಿರೂಪಣೆ ಮಾಡಿದರು.

ದೇಶದಲ್ಲಿ ೧೮೭೦ ರಿಂದ ೧೯೫೦ರವರೆಗಿನ ಜನಗಣತಿ, ಶಾಲಾ ದಾಖಲಾತಿ, ತಹಸಿಲ್ ದಾಖಲೆ, ಗೆಜೆಟ್ಗಳಲ್ಲಿ ಲಿಂಗಾಯತ ಎಂದು ನಮೂದಿಸಿರುವುದನ್ನು ದಾಖಲೆಗಳು ದೃಢಪಡಿಸುತ್ತವೆ. ೧೯೫೫ರ ನಂತರ ವೀರಶೈವ ಪದ ಸೇರಿಕೊಂಡಿದೆ. ಇಷಲಿಂಗ ಧರಿಸಿ ಬಸವಾದಿ ಶರಣರ ಬೋಧನೆಯಂತೆ ೭೭೦ ಅಮರಗಣಂಗಳ ಪರಂಪರೆಯಲ್ಲಿ ಮುನ್ನಡೆಯುತ್ತಿರುವ ಲಿಂಗಾಯತರು, ಸ್ವಾತಂತ್ರ್ಯಧರ್ಮದ ಮಾನ್ಯತೆ ದೊರಕುವವರೆಗೂ ಹೋರಾಟ ಮುಂದುವರಿಸಬೇಕು.

|ಶ್ರೀ ಗುರುಬಸವ ಪಟ್ಟದ್ದೇವರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ