ಜಿಲ್ಲೆ

ಲಿಂಕ್​ ಕೆನಾಲ್​ನಿಂದ ಜಿಲ್ಲೆಗೆ ಅನ್ಯಾಯ

ತುಮಕೂರು ಡೆಸ್ಕ್

ವಿಧಾನ ಪರಿಷತ್​ ಸದಸ್ಯ ಆರ್​.ರಾಜೇಂದ್ರ ಹೇಳಿಕೆ

ತುಮಕೂರು: ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ಗೆ ವೈಯುಕ್ತಿಕವಾಗಿ ನನ್ನ ವಿರೋಧವಿದೆ ಎಂದು ವಿಧಾನ ಪರಿಷತ್​ ಸದಸ್ಯ ಆರ್​.ರಾಜೇಂದ್ರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೇಮೆ ನೀರು ಹಂಚಿಕೆ ಪ್ರಮಾಣದ ಕುರಿತು ಕೇವಲ ಕುಣಿಗಲ್​ ಒಂದರ ಅಂಕಿ ಅಂಶ ತೋರಿಸಿ ಯೋಜನೆ ಮಾಡಲು ಹೊರಟಿದ್ದಾರೆ. ಅದೇ ವರ್ಷಗಳಲ್ಲಿ ತುಮಕೂರು, ಗುಬ್ಬಿ, ಮಧುಗಿರಿ, ಕೊರಟಗೆರೆ, ಶಿರಾ, ತುಮಕೂರು ಗ್ರಾಮಾಂತರ ಕ್ಷೇತ್ರಗಳಿಗೆ ಎಷ್ಟು ನೀರು ಹರಿದಿದೆ ಎಂಬ ಮಾಹಿತಿ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.

ಜಿಲ್ಲೆಗೆ ನಿಗದಿಯಾಗಿರುವ ಹೇಮೆ ನೀರಿನ ಪ್ರಮಾಣದಲ್ಲಿ ಬೇರೆ ತಾಲೂಕಿಗಳಿಗೆ ಈವರೆಗೆ ನೀರಿಗೆ ಹಂಚಿಕೆ ಆಗಿರುವ ನೀರನ್ನು ಬಿಟ್ಟು, ಒಂದು ತಾಲೂಕಿನ ಅಂಕಿ&ಅಂಶದ ಮೇಲೆ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಯೋಜನೆ ರೂಪಿಸಿರುವುದು ಸರಿಯಲ್ಲ. ಈ ಯೋಜನೆ ಅನುಷ್ಠಾನಗೊಂಡರೆ ಬೇರೆ ತಾಲೂಕುಗಳಿಗೆ ಅನ್ಯಾಯವಾಗಲಿದೆ ಎಂದು ಆಕ್ಷೇಪಿಸಿದರು.

ಖಾತೆ ಬದಲಾವಣೆ ಇಲ್ಲ: ಕೆ.ಎನ್​.ರಾಜಣ್ಣ ಅವರ ಇಷ್ಷದ ಕ್ಷೇತ್ರ ಸಹಕಾರಿ ರಂಗ. ಅದೇ ಖಾತೆ ಸಿಕ್ಕಿದೆ. ಮುಂದಿನ ಮೂರು ವರ್ಷ ಅದೇ ಖಾತೆಯಲ್ಲಿ ಮುಂದುವರಿಯಲಿದ್ದಾರೆ. ಗೃಹ ಸಚಿವರಾಗುತ್ತಾರೆ ಎನ್ನುವುದು ನನಗೆ ತಿಳಿಯದು ಎಂದು ರಾಜೇಂದ್ರ ಸ್ಪಷ್ಟಪಡಿಸಿದರು.

ಆರ್​ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ ಸರ್ಕಾರದ ತಪ್ಪಿದೆ. ಈ ದುರ್ಟನೆಗೆ ಆರ್​ಸಿಬಿ ತಂಡ, ಕಾರ್ಯಕ್ರಮ ಆಯೋಜಕರಾದಿಯಾಗಿ ಎಲ್ಲರದ್ದೂ ತಪ್ಪಿದೆ. ಕಪ್​ ಗೆದ್ದ ಮರುದಿನವೇ ವಿಜಯೋತ್ಸವ ಆಯೋಜಿಸುವ ಅಗತ್ಯ ಇರಲಿಲ್ಲ. ಈ ಪ್ರಕರಣದಲ್ಲಿ ಗುಪ್ತಚರ ವಿಭಾಗದ ಎಡಿಜಿಪಿ ಅವರನ್ನು ಅಮಾನತು ಮಾಡಬೇಕು. ಸರಿಯಾದ ಮಾಹಿತಿಯನ್ನು ಸರ್ಕಾರಕ್ಕೆ ಗುಪ್ತಚರ ಇಲಾಖೆ ತಲುಪಿಸಬೇಕಿತ್ತು. ಈ ಲೋಪವೇ ಇಷ್ಟೆಲ್ಲ ಅನಾಹುತಕ್ಕೆ ಕಾರಣ.

| ಆರ್​.ರಾಜೇಂದ್ರ ವಿಧಾನ ಪರಿಷತ್​ ಸದಸ್ಯ