ಜಿಲ್ಲೆ

ಲಾರಿಯ ಚಕ್ರ ಹರಿದು ವ್ಯಕ್ತಿ ಮೃತ

ಹಾಸನ: ತಾಲೂಕಿನ ಅಣ್ಣಿಗನಹಳ್ಳಿ ಗ್ರಾಮದಲ್ಲಿ ಲಾರಿಯ ಚಕ್ರ ಹರಿದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಲೋಕೇಶ್ (45)ಲಾರಿ ಚಕ್ರಕ್ಕೆ ಸಿಲುಕಿದ ಮೃತ ವ್ಯಕ್ತಿ .
ಲೋಕೇಶ ಎಂಬುವರು ಲಾರಿಗಳಿಗೆ ಮರಳು, ಇಟ್ಟಿಗೆ, ಎಂ.ಸ್ಯಾಂಡ್ ಇತರೇ ವಸ್ತುಗಳನ್ನು ಲೋಡಿಂಗ್ ಅನ್ ಲೋಡಿಂಗ್ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಅ.29 ರಂದು ಅಣ್ಣಿಗನಹಳ್ಳಿ ಗ್ರಾಮಕ್ಕೆ ಇಟ್ಟಿಗೆ ಅನ್‌ಲೋಡ್ ಮಾಡಲೆಂದು ಲಾರಿಯಲ್ಲಿ ಹೋಗಿದ್ದರು.


ಲಾರಿ ಚಾಲಕ ರಜನಿಕಾಂತ್ ಎಂಬುವರು ಹೊಸದಾಗಿ ಕಟ್ಟುತ್ತಿರುವ ಮನೆಯೊಂದರ ಬಳಿ ಲಾರಿಯನ್ನು ರಿವರ್ಸ್ ತೆಗೆದುಕೊಳ್ಳಲು ಏಕಾಏಕಿ ಅತಿವೇಗ ಮತ್ತು ಅಜಾಗರೂಕತೆಯಿಂದ ಯಾವುದೇ ಸೂಚನೆಯನ್ನು ನೀಡದೇ ರಿವರ್ಸ್ ತೆಗೆದುಕೊಂಡರು ಪರಿಣಾಮ ಲೋಕೇಶ (ಮೃತ) ಲಾರಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟರು. ಈ ಕುರಿತು ರಜನಿಕಾಂತ್ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಮೃತರ ಪತ್ನಿ ಸಾಕಮ್ಮ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರು ನೀಡಿದ್ದು. ಪೊಲೀಸರು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.