ಜಿಲ್ಲೆ

ಲಾರಿಗೆ ಬೆಂಕಿ

ಡಿ.ವಿ. ಕಮ್ಮಾರ

ಐನಾಪುರ: ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದಲ್ಲಿ ಸೋಮವಾರ ರಾತ್ರಿ ಲಾರಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಆರಂಭದಲ್ಲಿ ಕಾಗವಾಡ ಪಿಎಸ್ಐ ರಾಘವೇಂದ್ರ, ಅಥಣಿ ಪಿಎಸ್ಐ ಗಿರಮಲ್ಲ ಉಪ್ಪಾರ್ ಸ್ಥಳಕ್ಕೆ ಆಗಮಿಸಿದ್ದರು. ಉಗಾರ ಸಕ್ಕರೆ ಕಾರ್ಖಾನೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ಆರಿಸಿದ್ದಾರೆ.
ರಾಯಬಾಗ್ ತಾಲೂಕಿನ ಕುಡಚಿ ಪಟ್ಟಣದಿಂದ ಹೊರಟಿದ್ದ ಈ ಲಾರಿಯಲ್ಲಿ ಗೋಮಾಂಸವನ್ನು ಹೈದರಾಬಾದಿಗೆ ಸಾಗಿಸುತ್ತಿತ್ತು ಎನ್ನಲಾಗಿದೆ. ಲಾರಿಚಾಲಕ ಹಾಗೂ ಕ್ಲೀನರ‌ನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.  ಚಿಕ್ಕೋಡಿ ಡಿ ಎಸ್ ಪಿ ಗೌಡರ್ ಅಥಣಿ ಡಿಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಸಹ ಸ್ಥಳಕ್ಕೆ ಆಗಮಿಸಿದ್ದಾರೆ.