ಜಿಲ್ಲೆ

ಲಾರಿ ಡ್ರೈವಿಂಗ್ ತರಬೇತಿ ಶಾಲೆಗೆ ಚಿಂತನೆ

ಚಾಮರಾಜನಗರ: ದೇಶದಲ್ಲೇ ಇತ್ತೀಚೆಗೆ ಲಾರಿ ಚಾಲಕರ ಕೊರತೆ ಕಂಡುಬರುತ್ತಿದ್ದು, ಅದನ್ನು ನೀಗಿಸುವ ದೃಷ್ಟಿಯಿಂದ ಅಸೋಸಿಯನ್ ವತಿಯಿಂದಲೇ ಜಿಲ್ಲೆಯಲ್ಲಿ ಲಾರಿ ಡ್ರೈವಿಂಗ್ ತರಬೇತಿ ಶಾಲೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಲಾರಿ ಮಾಲೀಕರ ಅಸೋಸಿಯೇಷನ್ ರಾಜ್ಯಾಧ್ಯಕ್ಷ ನವೀನ್ ರೆಡ್ಡಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ೆಡರೇಷನ್ ಆ್ ಕರ್ನಾಟಕ, ಲಾರಿ ಮಾಲೀಕರ ಅಸೋಸಿಯೇಷನ್ ವತಿಯಿಂದ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ 34ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಲಾರಿ ಮಾಲೀಕರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಅದರಲ್ಲೂ ಇತ್ತೀಚೆಗೆ ಲಾರಿ ಚಾಲಕರ ಕೊರತೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಚಾಮರಾಜನಗರದಲ್ಲಿ ಸುಮಾರು 2.5 ಎಕರೆ ಜಾಗದಲ್ಲಿ ಅಸೋಸಿಯೇಷನ್ ವತಿಯಿಂದಲೇ ಲಾರಿ ಡ್ರೈವಿಂಗ್ ತರಬೇತಿ ಶಾಲೆಯನ್ನು ಪ್ರಾರಂಭಿಸಲಾಗುವುದು. ಈ ಮೂಲಕ ದೇಶಕ್ಕೆ ಲಾರಿ ಚಾಲಕರನ್ನು ಕೊಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.

ರಾಜ್ಯದಲ್ಲಿರುವ ಪೊಲೀಸರು ಮತ್ತು ಆರ್‌ಟಿಓ ಅಧಿಕಾರಿಗಳು ಕಚೇರಿಗಳಿಗಿಂತಲೂ ಹೆಚ್ಚಾಗಿ, ದಂಡ ವಸೂಲಿ ಮತ್ತು ಲಂಚಕ್ಕಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಂತಿದ್ದಾರೆ. ಅಪಘಾತಗಳು ನಡೆದಾಗಲೂ ಲಾರಿ ಚಾಲಕರು ಮತ್ತು ಮಾಲೀಕರು ಹೆಚ್ಚು ದೌರ್ಜನ್ಯ ಒಳಗಾಗುತ್ತಿದ್ದಾರೆ. ಮತ್ತೊಂದು ಕಡೆ ಒಂದು ತಿಂಗಳು ೈನಾನ್ಸ್ ಕಟ್ಟುವುದು ತಪ್ಪಿದರೆ, ೈನಾನ್ಸ್ ಕಂಪನಿಗಳು ನೋಟಿಸ್ ಜಾರಿ ಮಾಡುತ್ತಿದ್ದಾರೆ. ಈ ಮೂಲಕ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದು, ಲಾರಿ ಮಾಲೀಕರು ಈ ಕಾರಣಕ್ಕೂ ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಲಾರಿ ಮಾಲೀಕರು ಇನ್ಸೂರೆನ್ಸ್ ಮತ್ತು ಜಿಪಿಎಸ್ ಅಳವಡಿಕೆಯಿಂದಲೂ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ಈ ಕುರಿತು ಧ್ವನಿ ಎತ್ತಬೇಕಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್‌ಗಳಲ್ಲಿ ಚಾಲಕರಿಗೆ ಯಾವುದೇ ಮೂಲಸೌಕರ್ಯ ಕಲ್ಪಿಸದೇ, ವರ್ಷದಲ್ಲಿ ಶೇ.12 ರಷ್ಟು ಟೋಲ್ ದರವನ್ನು ಏರಿಕೆ ಮಾಡಲಾಗುತ್ತಿದೆ. ಹೆದ್ದಾರಿ ಮತ್ತು ನಗರ ಪ್ರದೇಶಗಳಲ್ಲಿ ಸೂಕ್ತ ರೀತಿಯಲ್ಲಿ ಲಾರಿ ಾರ್ಕಿಂಗ್ ಇಲ್ಲದೇ ಸಮಸ್ಯೆಯಾಗುತ್ತಿದ್ದು, ಈ ಕುರಿತು ಪ್ರಶ್ನೆಮಾಡಬೇಕಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಅಸೋಸಿಯೇಷನ್ ವತಿಯಿಂದ ವಿವಿಧ ತಂಡಗಳನ್ನು ಮಾಡಿ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಲಾರಿ ಚಾಲಕರಾದ ಎ.ಜಿ.ಮಹದೇವಪ್ಪ ಮತ್ತು ಜಾಮೀರ್ ಉಲ್ಲಾಖಾನ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಅಸೋಸಿಯೇಷನ್ ಗೌರವಾಧ್ಯಕ್ಷ ಡಿ.ಚನ್ನರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿ ಕೃಷ್ಣ, ಉಪಾಧ್ಯಕ್ಷ ಮುಖ್ತಾರ್, ಜಂಟಿ ಕಾರ್ಯದರ್ಶಿ ಜಾಬೀರ್ ಪಾಷಾ ಹಾಗೂ ಇತರರು ಹಾಜರಿದ್ದರು.

ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಸಭೆಯನ್ನು ಆಯೋಜಿಸಲಾಗಿದೆ. ಇದೊಂದು ಸದಾವಕಾಶವಾಗಿದ್ದು, ಕಾರ್ಯಕ್ರಮದಲ್ಲಿ ಈ ಹಿಂದೆ ಲಾರಿ ಮಾಲೀಕರ ಅಸೋಸಿಯೇಷನ್‌ನಲ್ಲಿ ಸೇವೆ ಸಲ್ಲಿಸಿರುವವರನ್ನು ಸ್ಮರಿಸಬೇಕಾಗಿದೆ. ಈ ಮೂಲಕ ಲಾರಿ ಮಾಲೀಕರು ನಮ್ಮ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ನಾರಾಯಣಪ್ರಸಾದ್, ಜಿಲ್ಲಾಧ್ಯಕ್ಷ, ಲಾರಿ ಮಾಲೀಕರ ಅಸೋಸಿಯೇಷನ್, ಚಾಮರಾಜನಗರ